alex Certify
ಕನ್ನಡ ದುನಿಯಾ       Mobile App
       

Kannada Duniya

ವಸ್ತುಗಳನ್ನು ಫ್ರೀಯಾಗಿ ನೀಡ್ತಿದೆ ಪೇಟಿಎಂ

ದೇಶದ ಅತಿ ದೊಡ್ಡ ಇ-ಕಾಮರ್ಸ್ ಕಂಪನಿಗಳಾದ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ಹಬ್ಬಕ್ಕೆ ವಿಶೇಷ ಕೊಡುಗೆ ನೀಡುವ ತಯಾರಿಯಲ್ಲಿದೆ. ಕೆಲ ಉತ್ಪನ್ನಗಳಿಗೆ ಶೇಕಡಾ 90ರಷ್ಟು ರಿಯಾಯಿತಿ ನೀಡಿ ಗ್ರಾಹಕರನ್ನು ಆಕರ್ಷಿಸಲಿದೆ. ಏತನ್ಮಧ್ಯೆ ಇ-ಕಾಮರ್ಸ್ ಕ್ಷೇತ್ರಕ್ಕೆ ಇತ್ತೀಚಿಗಷ್ಟೇ ಕಾಲಿಟ್ಟಿರುವ ಪೇಟಿಎಂ ಮಾಲ್ ಈ ಎರಡೂ ಕಂಪನಿಗಳಿಗೆ ಶಾಕ್ ನೀಡುವ ತಯಾರಿಯಲ್ಲಿದೆ.

ಪೇಟಿಎಂ ಮಾಲ್ ಸಿಇಓ ಈ ಬಗ್ಗೆ ಮಹತ್ವದ ಸೂಚನೆ ನೀಡಿದ್ದಾರೆ. ನೀವು ಶೇಕಡಾ 90ರಷ್ಟು ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತೀರಾದರೆ ಶೇಕಡಾ 100ರಷ್ಟು ರಿಯಾಯಿತಿ ಏಕೆ ತೆಗೆದುಕೊಳ್ಳಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆ ಮುಂದಿನ ಸೇಲ್ ನಲ್ಲಿ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ನೀಡುವುದಾಗಿ ಸಿಇಓ ಹೇಳಿದ್ದಾರೆ.

ಸೇಲ್ ತಂಡ ಯೋಜನೆಯನ್ನು ರೂಪಿಸ್ತಿದ್ದು, ಮುಂದಿನ ಸೇಲ್ ನಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ಸೇಲ್ ಸಂದರ್ಭದಲ್ಲಿಯೇ ಪೇಟಿಎಂ ಸೇಲ್ ನಡೆಯಲಿದೆ. ಸೇಲ್ ಗೆ ಪೇಟಿಎಂ ಇನ್ನೂ ಅಧಿಕೃತ ಹೆಸರು ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...