alex Certify
ಕನ್ನಡ ದುನಿಯಾ       Mobile App
       

Kannada Duniya

ಹಣಕಾಸು ನಿರ್ವಹಣೆಗೆ ಪೇಟಿಎಂನಲ್ಲಿದೆ ಸ್ಪೆಷಲ್ ಫೀಚರ್

paytm

ಪೇಮೆಂಟ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿರುವ ಪೇಟಿಎಂ, ಗ್ರಾಹಕರು ಮತ್ತು ವ್ಯಾಪಾರಿಗಳ ವಹಿವಾಟನ್ನು ಸುಲಭಗೊಳಿಸಲು ಇನ್ನಷ್ಟು ಹೊಸ ಫೀಚರ್ ಗಳನ್ನು ಪರಿಚಯಿಸಿದೆ.

ಮೊಬೈಲ್ ವಾಲೆಟ್ ಕಥೆಯೇನು?

ಬಳಕೆದಾರರು ಖಾತೆ ತೆರೆಯಲು ಮುಂದಾದಲ್ಲಿ ಮೊಬೈಲ್ ವಾಲೆಟ್ ಬ್ಯಾಲೆನ್ಸ್ ನಿಮ್ಮ ಅಕೌಂಟ್ ಬ್ಯಾಲೆನ್ಸ್ ಆಗಿ ಪರಿವರ್ತನೆಯಾಗುತ್ತದೆ. ಆ ಹಣದಿಂದ್ಲೇ ನೀವು ಕ್ಯಾಬ್ ಬಿಲ್ ಪಾವತಿಸಬಹುದು, ರಿಚಾರ್ಜ್, ಆನ್ ಲೈನ್ ಶಾಪಿಂಗ್ ಎಲ್ಲವನ್ನೂ ಮಾಡಬಹುದು. ಕೆಲವೊಂದು ಸೂಕ್ಷ್ಮ ಹಣಕಾಸು ಸೇವೆಯನ್ನು ಕೂಡ ಪೇಟಿಎಂ ಒದಗಿಸುತ್ತಿದೆ. ಸಾಲ, ಮ್ಯೂಚುವಲ್ ಫಂಡ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇನ್ಷೂರೆನ್ಸ್ ಸೌಲಭ್ಯ ದೊರೆಯಲಿದೆ.

ವ್ಯಾಪಾರಿಗಳು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ 50,000 ರೂ. ಸ್ವೀಕರಿಸಬಹುದು….

ಪ್ರತಿದಿನ ಮಧ್ಯರಾತ್ರಿ ಅಮೌಂಟ್ ಸೆಟಲ್ಮೆಂಟ್ ಮಾಡಲಾಗುತ್ತದೆ, ಇದಕ್ಕೆ ಯಾವುದೇ ಶುಲ್ಕವಿಲ್ಲ. ಎಲ್ಲವೂ ಪೇಟಿಎಂ ಪೇಮೆಂಟ್ ಬ್ಯಾಂಕ್ ಅಕೌಂಟ್ ನಲ್ಲಿ ಭದ್ರವಾಗಲಿದ್ದು, ಶುಲ್ಕ ವಿಧಿಸಲಾಗುತ್ತಿಲ್ಲ. ಬೇರೆ ಬೇರೆ ಬ್ಯಾಂಕ್ ಖಾತೆಗಳ ಮೇಲೆ ಮುಂಬರುವ ದಿನಗಳಲ್ಲಿ ಪೇಟಿಎಂ ಶುಲ್ಕ ವಿಧಿಸಬಹುದು.

ಒಂದೇ ಸ್ಕ್ರೀನ್ ಮೂಲಕ ವೇಗವಾಗಿ ಹಣ ಜಮಾ ಮಾಡಬಹುದು….

ಇದರಿಂದ ನಿಮ್ಮ ಸಮಯ ಉಳಿತಾಯವಾಗಲಿದೆ. ಲೋಡಿಂಗ್ ಗೆ ಹೆಚ್ಚು ಕಾಲಾವಕಾಶ ಬೇಡ.

ಪೇಟಿಎಂ ಪಾಸ್ವರ್ಡ್ ಆಗಿ ಬೆರಳಚ್ಚು ಮುದ್ರೆ….

ಪೇಟಿಎಂ ಕೂಡ ಫಿಂಗರ್ ಪ್ರಿಂಟ್ ಪಾಸ್ವರ್ಡ್ ಅನ್ನು ಪರಿಚಯಿಸಿದೆ. ಇದು ಅತ್ಯಂತ ಸುಲಭ ಮತ್ತು ತ್ವರಿತವಾಗಿ ಕಾರ್ಯ ನಿರ್ವಹಿಸಬಹುದು. ಅಷ್ಟೇ ಅಲ್ಲ ಶೇ.100 ಕ್ಕೆ ನೂರರಷ್ಟು ಸುರಕ್ಷಿತ ಎನ್ನುತ್ತದೆ ಪೇಟಿಎಂ.

ಸ್ವೀಕರಿಸುವವರ ಫೋನ್ ಇಮೇಜ್ ಗ್ಯಾಲರಿಯಿಂದ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು….

ಇಮೇಲ್ ಅಥವಾ ವಾಟ್ಸಾಪ್ ಮೂಲಕ ಪಡೆದ ಕ್ಯೂಆರ್ ಕೋಡ್ ಗಳನ್ನು ನೀವು ಸ್ಕ್ಯಾನ್ ಮಾಡಬಹುದು. ಇದಕ್ಕಾಗಿ ಬಳಕೆದಾರರು ಸ್ಕ್ರೀನ್ ಬಲಭಾಗದ ಮೇಲ್ಗಡೆಯ ಮೂಲೆಯಲ್ಲಿ ‘Scan Paytm QR From Gallery’ ಆಪ್ಷನ್ ಮೇಲೆ ಟ್ಯಾಪ್ ಮಾಡಬೇಕು.

ಪೇಟಿಎಂ ಕಮ್ಯೂನಿಟಿ ಫೋರಂನಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ….

ಪೇಟಿಎಂ ಆಪ್ ನಲ್ಲೇ ಪೇಟಿಎಂ ಕಮ್ಯೂನಿಟಿ ಫೋರಂ ಇದೆ. ಏನಾದರೂ ಸಮಸ್ಯೆ ಇದ್ದಲ್ಲಿ ಫೋರಂನಲ್ಲಿಯೇ ಸೂಕ್ತ ಪರಿಹಾರ ಸೂಚಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • GST ಜಾರಿಗೊಂಡ ಬಳಿಕ ಬಗೆಹರಿಯುತ್ತಾ ಜನ ಸಾಮಾನ್ಯರ ಬವಣೆ..?

    View Results

    Loading ... Loading ...