alex Certify
ಕನ್ನಡ ದುನಿಯಾ       Mobile App
       

Kannada Duniya

ಭತ್ಯೆಗಾಗಿ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ ಪೈಲಟ್ಸ್

ಏರ್ ಇಂಡಿಯಾದ ಕೆಲ ಪೈಲಟ್ ಗಳು ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದರೆ ಈ ಕೂಡಲೇ ವಿಮಾನ ಹಾರಾಟ ನಿಲ್ಲಿಸೋದಾಗಿ ಕೆಲ ಪೈಲಟ್ ಗಳು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಪೈಲಟ್ ಗಳಿಗೆ ವಿಮಾನದ ಸಿಬ್ಬಂದಿ ಕೂಡ ಸಾಥ್ ಕೊಟ್ಟಿದ್ದಾರೆ. ಭಾರತೀಯ ವಾಣಿಜ್ಯೋದ್ಯಮ ಪೈಲಟ್ಸ್ ಸಂಘ ಈ ಹೋರಾಟದ ನೇತೃತ್ವ ವಹಿಸಿದೆ.

ಜುಲೈ ತಿಂಗಳಲ್ಲಿ ಪೈಲಟ್ ಗಳು ಮತ್ತು ವಿಮಾನದ ಸಿಬ್ಬಂದಿಗೆ ಪಾವತಿಯಾಗಿರೋದು ಬೇಸಿಕ್ ಸ್ಯಾಲರಿಗಳಷ್ಟೆ. ಆದ್ರೆ ಪೈಲಟ್ ಗಳು ಮತ್ತು ಸಿಬ್ಬಂದಿಯ ನಿಜವಾದ ಆದಾಯದ ಮೂಲವೇ ಅವರ ಇತರೆ ಭತ್ಯೆಗಳು. ಪೈಲಟ್ ಮತ್ತು ವಿಮಾನ ಸಿಬ್ಬಂದಿಯ ಒಟ್ಟಾರೆ ಆದಾಯದಲ್ಲಿ ಮೂಲ ವೇತನದ ಪಾಲು ಶೇಕಡಾ 30ರಷ್ಟಿದೆ.

ಜುಲೈ ತಿಂಗಳ ಸಂಬಳವನ್ನು ಏರ್ ಇಂಡಿಯಾದ ಎಲ್ಲಾ ಸಿಬ್ಬಂದಿ ಪಡೆದಿರೋದು ಆಗಸ್ಟ್ 14ನೇ ತಾರೀಕಿನಂದು. ಅದು ಕೂಡ ಒಟ್ಟಾರೆ ಸಂಬಳದ ಶೇಕಡಾ 30 ಭಾಗ ಮಾತ್ರ. ಹಾಗಾಗಿ ಬಾಕಿ ಉಳಿಸಿಕೊಂಡಿರುವ ಭತ್ಯೆಯನ್ನು ಕೂಡಲೇ ನೀಡಬೇಕು ಅಂತ ವಿಮಾನ ಚಾಲಕರು ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಪತ್ರವೊಂದನ್ನು ತಮ್ಮ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಸಂಬಳ ಏಕೆ ತಡವಾಗುತ್ತಿದೆ ಮತ್ತು ಪ್ರಯಾಣದ ಭತ್ಯೆಯನ್ನು ಏಕೆ ನೀಡಲಾಗ್ತಿಲ್ಲ ಅನ್ನೋ ಬಗ್ಗೆ ಆಡಳಿತ ಮಂಡಳಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆ ವಿಮಾನ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ.

ಅತ್ತ ಏರ್ ಇಂಡಿಯಾ ಈ ವಿಚಾರದಲ್ಲಿ ಮುಂದೇನು ಮಾಡಬೇಕು ಅನ್ನೋ ಗೊಂದಲಕ್ಕೆ ಬಿದ್ದಿದೆ. ಏಕಂದ್ರೆ ಕೇಂದ್ರ ಸರ್ಕಾರದಿಂದ 500 ಕೋಟಿ ನೆರವಿನ ನಿರೀಕ್ಷೆಯಲ್ಲಿದೆ ಏರ್ ಇಂಡಿಯಾ. ಅದರ ಜೊತೆಗೆ ಸಾಲ ಸೌಲಭ್ಯವನ್ನು ಖಾಸಗಿ ಅಥವಾ ಸರ್ಕಾರಿ ಬ್ಯಾಂಕ್ ಗಳಿಂದ ಎದುರು ನೋಡುತ್ತಿದೆ. ಭಾರತೀಯ ಪೈಲಟ್ ಗಳ ಒಕ್ಕೂಟ ಬರೆದಿರುವ ಪತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಆಡಳಿತ ಮಂಡಳಿ ಈ ಸಂಬಂಧ ಮಹತ್ವದ ಸಭೆಯನ್ನು ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...