alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಇಂಡಿಯಾಗೆ ಎದುರಾಯ್ತು ಹೊಸ ಸಂಕಷ್ಟ

ಆರ್ಥಿಕ‌ ಸಂಕಷ್ಟದಲ್ಲಿರುವ ಏರ್ ಇಂಡಿಯಾಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ‌.

ಹಲವು ವರ್ಷಗಳಿಂದ ನಷ್ಟದಲ್ಲಿರುವ ಏರ್ ಇಂಡಿಯಾ, ವಿವಿಧ ತೈಲ‌ ಕಂಪನಿಗಳಿಂದ ಖರೀದಿಸಿದ ತೈಲದ ಮೊತ್ತ ಐದು ಸಾವಿರ ಕೋಟಿ‌ ಮೀರಿದರೂ, ಅದನ್ನು ಪಾವತಿಸಿಲ್ಲ. ಆದ್ದರಿಂದ ಇನ್ನು ಮುಂದೆ ಹಣ ನೀಡದಿದ್ದರೆ‌‌ ತೈಲ ಕೊಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ತೈಲ ಕಂಪನಿಗಳು ನೀಡಿವೆ ಎಂದು ಮೂಲಗಳು‌ ತಿಳಿಸಿವೆ.

ಪ್ರತಿನಿತ್ಯ ಏರ್ ಇಂಡಿಯಾಗೆ ವಿಮಾನಗಳ‌ ಹಾರಾಟಕ್ಕೆ ಸುಮಾರು 20 ಕೋಟಿ ಮೌಲ್ಯದ ತೈಲದ ಅವಶ್ಯಕತೆಯಿದೆ. ಇನ್ನು ಮುಂದೆ ದಿನದ‌ ಲೆಕ್ಕದಲ್ಲಿ‌ ಈ ಹಣ ನೀಡಿದರೆ ಮಾತ್ರ ತೈಲ‌ ಸರಬರಾಜು ಮಾಡುತ್ತೇವೆ ಎಂದು ತೈಲ ಕಂಪನಿಗಳು ಹೇಳಿವೆ. ಆದರೆ ಈಗಾಗಲೇ ಹಲವು‌ ತಿಂಗಳಿನಿಂದ ದಿನದ ಲೆಕ್ಕದಲ್ಲಿಯೇ ತೈಲ‌ ಖರೀದಿ ಮಾಡುತ್ತಿದ್ದರು, ಅದನ್ನು ಸರಿಯಾಗಿ ಪಾವತಿಸುತ್ತಿಲ್ಲ. ಬಾಕಿ ಹಣವನ್ನು ಪಾವತಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತೈಲ‌ ಉತ್ಪನ್ನ ಘಟಕದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಕೇಂದ್ರದ ಸ್ವಾಯತ್ತ ಸಂಸ್ಥೆ ಎನ್ನುವ ಕಾರಣಕ್ಕೆ ಇನ್ನೂ ಸರಬರಾಜು ಮಾಡಲಾಗುತ್ತಿದೆ. ಒಂದು ವೇಳೆ ಖಾಸಗಿ ಸಂಸ್ಥೆಯಾಗಿದ್ದರೆ ಈ ಹೊತ್ತಿಗೆ ತೈಲ ಸರಬರಾಜು ಸ್ಥಗಿತಗೊಳಿಸಲಾಗುತ್ತಿತ್ತು. ದೇಶ ವಿದೇಶದ ತೈಲ‌ಕಂಪನಿಯಲ್ಲಿ ಇಟ್ಟುಕೊಂಡಿರುವ ಬಾಕಿ ಹಣವನ್ನು‌ ಶೀಘ್ರದಲ್ಲಿಯೇ ಪಾವತಿಸದಿದ್ದರೆ ಕಷ್ಠವಾಗುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...