alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದು ನಿಜಕ್ಕೂ ಬ್ಯಾಡ್ ನ್ಯೂಸ್. ನಿಮ್ಮ ಸ್ಮಾರ್ಟ್ ಫೋನ್ ಸೆನ್ಸಾರ್, ಫೋನ್ ನಲ್ಲಿರೋ ಡೇಟಾ, ಪಿನ್ ಮತ್ತು ಪಾಸ್ವರ್ಡ್ ಗಳನ್ನೆಲ್ಲ ಹ್ಯಾಕರ್ ಗಳಿಗೆ ಬಹಿರಂಗಪಡಿಸುತ್ತಿದೆ. ಸೆನ್ಸಾರ್ ಮೂಲಕ ಪಿನ್ ಮತ್ತು ಪಾಸ್ವರ್ಡ್ ತಿಳಿದುಕೊಂಡು ಹ್ಯಾಕರ್ ಗಳು ನಿಮ್ಮ ಡಿವೈಸ್ ಗೆ ಆ್ಯಕ್ಸೆಸ್ ಪಡೆಯುತ್ತಿದ್ದಾರೆ.

ಭಾರತೀಯ ವಿಜ್ಞಾನಿಯೊಬ್ಬರು ಇದನ್ನು ಪತ್ತೆ ಮಾಡಿದ್ದಾರೆ. ಗೈರೋಸ್ಕೋಪ್ ಹಾಗೂ ಪ್ರೊಕ್ಸಿಮಿಟಿ ಸೆನ್ಸಾರ್ ಗಳಿಂದ ಪಿನ್ ಮತ್ತು ಪಾಸ್ವರ್ಡ್ ಹ್ಯಾಕರ್ ಗಳ ಕೈಸೇರುವ ಸಾಧ್ಯತೆ ಹೆಚ್ಚಾಗಿದೆ. ಮೊದಲು ಸ್ಮಾರ್ಟ್ ಫೋನ್ ಹ್ಯಾಕ್ ಆಗುವ ಸಾಧ್ಯತೆ ಶೇ.74ರಷ್ಟಿತ್ತು.

ಆದ್ರೆ ಈಗ ಶೇ.99.5ರಷ್ಟು ಖಚಿತವಾಗಿ ಹ್ಯಾಕರ್ ಗಳು ಪಿನ್ ಮತ್ತು ಪಾಸ್ವರ್ಡ್ ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅರ್ಧದಷ್ಟು ಸ್ಮಾರ್ಟ್ ಫೋನ್ ಬಳಕೆದಾರರು ಒಂದೇ ತೆರನಾದ ಪಿನ್, ಪಾಸ್ವರ್ಡ್ ಇಟ್ಟಿರೋದು ಕೂಡ ಬೆಳಕಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...