alex Certify
ಕನ್ನಡ ದುನಿಯಾ       Mobile App
       

Kannada Duniya

ಪಂತಂಜಲಿ ಉತ್ಪನ್ನಗಳ ಮಾರಾಟದಲ್ಲಿ ಇಳಿಕೆ…!

ಯೋಗಗುರು ಬಾಬಾ ರಾಮ್‌ದೇವ್‌ ಅವರ ಪತಂಜಲಿ ಹರ್ಬಲ್‌ ಉತ್ಪನ್ನಗಳಿಗೆ ಸ್ಪರ್ಧೆ ಮತ್ತಷ್ಟು ಹೆಚ್ಚಿದೆ. ಮಾರುಕಟ್ಟೆಯಲ್ಲಿ ಹರ್ಬಲ್‌ ಉತ್ಪನ್ನಗಳಿಗೆ ಬೇಡಿಕೆ ಕಂಡು ಬೇರೆ ಕಂಪನಿಗಳು ಹೆಚ್ಚು ಹೊಸ ಹರ್ಬಲ್‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ.

ಕಳೆದ ವರ್ಷ ಶೇ.100 ರಷ್ಟು ಬೆಳವಣಿಗೆ ಕಂಡಿದ್ದ ಪತಂಜಲಿ ಸಂಸ್ಥೆಯ ಉತ್ಪನ್ನಗಳ ಮಾರಾಟ, ಈ ಬಾರಿ ಕೊಂಚ ಇಳಿಕೆಯಾಗಿತ್ತು. ಮಾರುಕಟ್ಟೆ ಇಳಿಕೆಯಾಗಲು ಪ್ರಮುಖ ಕಾರಣ, ಉತ್ಪನ್ನಗಳ ಅಲಭ್ಯತೆಯೇ ಆಗಿವೆ. ಗ್ರಾಹಕರು ಕೇಳುವ ಉತ್ಪನ್ನಗಳು ಪತಂಜಲಿ ಅಂಗಡಿಗಳಲ್ಲಿ ಇರುವುದೇ ಇಲ್ಲ. ಸಂಸ್ಥೆಯ ಒಟ್ಟಾರೆ ಬೆಳವಣಿಗೆಗೆ ಇದು ದೊಡ್ಡ ಹೊಡೆತ ಕೊಟ್ಟಿತ್ತು ಎಂದು ಖಾಸಗಿ ರಿಟೇಲ್‌ ಸಂಸ್ಥೆಯ ಹಿರಿಯ ವ್ಯವಸ್ಥಾಪಕರೊಬ್ಬರು ಹೇಳಿದ್ದಾರೆ.

2017 ಅಕ್ಟೋಬರ್‌ನಿಂದ 2018 ಮಾರ್ಚ್‌ ವರೆಗೆ ಪತಂಜಲಿ ಶೇ.52 ಬೆಳವಣಿಗೆ ಕಂಡಿತ್ತು. ಟೂತ್‌ ಪೇಸ್ಟ್‌ ಮತ್ತು ಜೇನು ಮಾರಾಟ ಕೊಂಚ ಅಧಿಕವಾಗಿದ್ದು ಬಿಟ್ಟರೆ, ಇನ್ನುಳಿದ ಉತ್ಪನ್ನಗಳು ಮಾರಾಟದಲ್ಲಿ ಏರಿಕೆಯಾಗಿಲ್ಲ. ಶ್ಯಾಂಪೂ, ಸಾಬೂನು, ಹೇರ್‌ ಆಯಿಲ್‌ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿವೆ ಎಂದು ಅಂಬಿಟ್‌ ಕ್ಯಾಪಿಟಲ್ ವರದಿ ಮಾಡಿತ್ತು.

ಈ ವರದಿಗಳನ್ನೇ ಇನ್ನಿತರ ಅನೇಕ ಸಂಸ್ಥೆಗಳು ಬಂಡವಾಳವನ್ನಾಗಿಸಿದ್ದು, ಹೊಸ ಹೇರ್‌ ಆಯಿಲ್ ಹಾಗೂ ಹರ್ಬಲ್‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ.
ಈಗ ಮಾರುಕಟ್ಟೆ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಜನರಿಗೆ ಅಗತ್ಯವಾದ ವಿವಿಧ ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಂಸ್ಥೆ ಸಿದ್ಧವಾಗಿದೆ. ಆಹಾರ ಉತ್ಪನ್ನಗಳು, ಹರ್ಬಲ್‌, ಡೈರಿ ಉತ್ಪನ್ನಗಳನ್ನೂ ಮಾರುಕಟ್ಟೆಗೆ ತರಲಿದೆ. ಮನೆ ಬಳಕೆಗೆ ಅಗತ್ಯವಾದ ಸಾಮಾಗ್ರಿಗಳ ಮಾರಾಟವನ್ನು ಗಣನೀಯವಾಗಿ ಏರಿಕೆ ಮಾಡಿರುವ ಪತಂಜಲಿ ಸಂಸ್ಥೆ, ಈ ಭಾಗಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...