alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟರ್ ಬಾಟಲ್ ಕ್ಷೇತ್ರಕ್ಕೆ ಕಾಲಿಟ್ಟ ಪತಂಜಲಿ

ದೇಶದಲ್ಲಿ ಹೆಸರು ಮಾಡುತಿರುವ ಬಾಬಾ ರಾಮ್ದೇವ್ ಪತಂಜಲಿ ಬ್ರ್ಯಾಂಡ್ ಈಗ ಬಾಟಲ್ ನೀರಿನ          ವ್ಯವಹಾರಕ್ಕೆ ಕೈ ಹಾಕುತ್ತಿದೆ. ಪತಂಜಲಿ ಬಾಟಲ್ ನೀರಿಗೆ ದಿವ್ಯ ವಾಟರ್ ಎಂದು ಹೆಸರಿಟ್ಟಿದೆ. ಉತ್ತರ ಭಾರತದಲ್ಲಿ ಇದನ್ನು ಬಿಡುಗಡೆ ಮಾಡಲು ಪತಂಜಲಿ ಮುಂದಾಗಿದೆ.

ಪತಂಜಲಿ ಉತ್ತರ ಭಾರತದ ದೆಹಲಿ-ಎನ್ಸಿಆರ್, ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ ಮತ್ತು ಹರ್ಯಾಣದಲ್ಲಿ ದಿವ್ಯ ವಾಟರ್ ವಿತರಿಸಲು ಮುಂದಾಗಿದೆ. ಇದಕ್ಕಾಗಿ ವಿತರಕರ ಅಗತ್ಯವಿದೆ ಎಂದು ಕಂಪನಿ ಹೇಳಿದೆ. ಪತಂಜಲಿ 250 ಮಿಲಿ ಲೀಟರ್, 500 ಮಿಲಿ ಲೀಟರ್, 1 ಲೀಟರ್, 2 ಲೀಟರ್, 5 ಲೀಟರ್ ಮತ್ತು 20 ಲೀಟರ್ ಪ್ಯಾಕಿಂಗ್ ವಿತರಿಸಲು ನಿರ್ಧರಿಸಿದೆ.

ಐದು ರಾಜ್ಯಗಳಲ್ಲಿ ದಿವ್ಯ ವಾಟರ್ ಮಾರಾಟಕ್ಕೆ ವಿತರಕರ ಹುಡುಕಾಟದಲ್ಲಿರುವ ಪತಂಜಲಿ ಈ ಬಗ್ಗೆ ಜಾಹೀರಾತು ನೀಡಿದೆ. ಈಗಾಗಲೇ ಅನುಭವವುಳ್ಳ,ಆಯಾ ಕ್ಷೇತ್ರದಲ್ಲಿ ನೀರಿನ ಬಾಟಲಿ ವಿತರಣೆಯಲ್ಲಿ ಹೆಸರು ಮಾಡಿರುವ, ಆರ್ಥಿಕವಾಗಿ ಬಲವುಳ್ಳ, ನೀರನ್ನು ಸಂಗ್ರಹಿಸಲು ವ್ಯವಸ್ಥೆಯಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...