alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಪತಂಜಲಿ ಆಯುರ್ವೇದದಲ್ಲಿ 50 ಸಾವಿರ ಉದ್ಯೋಗಾವಕಾಶ

ದೇಶದ ಪ್ರಸಿದ್ಧ ಕಂಪನಿ ಪತಂಜಲಿ ಆಯುರ್ವೇದ ತನ್ನ ಕ್ಷೇತ್ರ ವಿಸ್ತರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ 50 ಸಾವಿರ ಸೇಲ್ಸ್ ಮೆನ್ ಹುದ್ದೆಗೆ ಅರ್ಜಿ ಕರೆದಿದೆ. ಪತಂಜಲಿ ಜೊತೆ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪತಂಜಲಿ ಆಹಾರ (ಹಿಟ್ಟು, ಅಕ್ಕಿ, ಜ್ಯೂಸ್, ತೈಲ, ಬಿಸ್ಕಿಟ್) ಆರೈಕೆ, ಗೃಹ ಬಳಕೆ ವಸ್ತು, ದೇವರ ಪೂಜಾ ಸಾಮಗ್ರಿ ಮಾರಾಟ ವಿಭಾಗಕ್ಕೆ ಸೇಲ್ಸ್ ಮೆನ್ ಗಳ ಅಗತ್ಯವಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಧಿಕಾರಿಗಳು ಜಿಲ್ಲೆಯ ಪತಂಜಲಿ ಮುಖ್ಯಸ್ಥ /ಎ.ಎಸ್.ಎಮ್ ರನ್ನು ಸಂಪರ್ಕಿಸಬೇಕು. ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ಜೂನ್ 23ರಿಂದಲೇ ಹೆಸರು ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ಜೂನ್ 27ರವರೆಗೆ ಅವಕಾಶವಿದೆ.

ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ 8 ಸಾವಿರದಿಂದ 15 ಸಾವಿರದವರೆಗೆ ಸಂಬಳ ಸಿಗಲಿದೆ. ನಗರ ಹಾಗೂ ವಿದ್ಯಾರ್ಹತೆಗನುಗುಣವಾಗಿ ಸಂಬಳ ನಿಗದಿಯಾಗಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕು. ಬಿಎ, ಬಿಎಸ್ಸಿ, ಎಂಬಿಎ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...