alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಮಾತು ತಪ್ಪಿದ ‘ಪತಂಜಲಿ’

ವಾಟ್ಸಾಪ್ ಗೆ ಸ್ಪರ್ಧೆ ನೀಡುವಂಥ ಕಿಂಬೋ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ಸೇವೆ ಆರಂಭಿಸಲು ಹೊರಟ ಪತಂಜಲಿ ಆಯುರ್ವೇದ ಸಂಸ್ಥೆ ಜನರಿಗೆ ಕೊಟ್ಟ ಮಾತು ತಪ್ಪಿದೆ.

ಕಿಂಬೋ ಅಪ್ಲಿಕೇಷನ್ ಬಿಡುಗಡೆ ಮಾಡುವ ಹೊಸ ದಿನಾಂಕವನ್ನು ಶೀಘ್ರವಾಗಿ ಘೋಷಿಸುತ್ತೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಆ.27 ರಂದು ತಿಳಿಸಿದ್ದಾರೆ.

ಕಳಪೆ ಸುರಕ್ಷತಾ ಕ್ರಮದ ಕಾರಣಕ್ಕೆ ಸ್ವದೇಶಿ ಅಪ್ಲಿಕೇಷನ್ ಕಿಂಬೊವನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿತ್ತು. ಈ ಹಿಂದೆ ಕಿಂಬೋ ಬಿಡುಗಡೆಯಾದಾಗ ಅನೇಕ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಆಗಸ್ಟ್ 15 ರಂದು ನವೀಕರಿಸಿದ ರೂಪದಲ್ಲಿ ಪುನಃ ಪ್ರಾಯೋಗಿಕ ಅವೃತಿಯನ್ನು ಬಿಡುಗಡೆ ಮಾಡುಲಾಗಿತ್ತು. ಆದರೆ ಗ್ರಾಹಕರು ಅದಕ್ಕೂ ಆಕ್ಷೇಪ ತೆಗೆದು ಅನೇಕ ಸಮಸ್ಯೆ ಇರುವುದರ ಬಗ್ಗೆ ವರದಿ ಮಾಡಿದ್ದರು. ಪ್ರಮುಖವಾಗಿ ಪ್ರೊಫೈಲ್ ಪಿಕ್ಚರ್ ಅಳವಡಿಸುವಲ್ಲಿ ಸಮಸ್ಯೆಯಾಗುತ್ತಿತ್ತು.

ಆ.15ರಂದು ಬಿಡುಗಡೆಗೊಂಡ ಆಪ್ ನ ಗೌಪ್ಯತೆ ನೀತಿ ಪ್ರಕಾರ, ಬಳಕೆದಾರರ ಮೊಬೈಲ್ ಸಂಖ್ಯೆ, ವೈಯಕ್ತಿಕ ಮಾಹಿತಿಯನ್ನು ಇತರೆ ಕಂಪೆನಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಅಪ್ಲಿಕೇಷನ್ ಅನ್ನು ನೋಯ್ಡಾದ ಸೋಷಿಯಲ್ ರಿನೋವೇಷನ್, ಮೀಡಿಯಾ ಅಂಡ್ ರಿಸರ್ಚ್ ಪ್ರೈ.ಲಿ. ಸಿದ್ಧಪಡಿಸುತ್ತಿದ್ದು, ಪ್ರಯೋಗ ಆವೃತಿಯನ್ನೇ 50 ಸಾವಿರ ಗ್ರಾಹಕರು ಡೌನ್ ಲೋಡ್ ಮಾಡಿಕೊಂಡಿದ್ದರು.

ಈ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿರುವ ಆಚಾರ್ಯ ಬಾಲಕೃಷ್ಣ, ಕಿಂಬೋ ಅಪ್ಲಿಕೇಶನ್ ಅಧಿಕೃತ ಬಿಡುಗಡೆಯ ಬಗ್ಗೆ ನಿಮ್ಮ ಉತ್ಸಾಹವನ್ನು ನಾವು ಪ್ರಶಂಸಿಸುತ್ತೇವೆ.‌ ಸ್ವದೇಶಿ ಆಪ್ ಕಿಂಬೋವನ್ನು ಸುರಕ್ಷಿತವಾಗಿ, ಅನುಕೂಲಕರವಾಗಿ ನಿಮ್ಮ ಮೊದಲ ಆಯ್ಕೆಯನ್ನಾಗಿ ಮಾಡಲು ಪ್ರಯೋಗಗಳು, ವಿಮರ್ಶೆ ಮತ್ತು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...