alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ಪೋರ್ಟ್ ಮಾಡಿಸುವವರಿಗೊಂದು ‘ಖುಷಿ ಸುದ್ದಿ’

ಹೊಸದಾಗಿ ಪಾಸ್ಪೋರ್ಟ್ ಮಾಡಿಸುವವರಿಗೊಂದು ಖುಷಿ ಸುದ್ದಿ. ಮೂರೇ ದಿನಗಳಲ್ಲಿ ಪಾಸ್ಪೋರ್ಟ್ ನಿಮ್ಮ ಕೈ ಸೇರಲಿದೆ. ಅದಕ್ಕಾಗಿ ಹೆಚ್ಚಿನ ದಾಖಲೆ ನೀಡುವ ಅವಶ್ಯಕತೆ ಕೂಡ ಇಲ್ಲ.

ತತ್ಕಾಲ್ ಯೋಜನೆಯಡಿ ಮೂರೇ ದಿನದಲ್ಲಿ ಪಾಸ್ಪೋರ್ಟ್ ನಿಮ್ಮ ಕೈ ಸೇರಲಿದೆ. ವಿದೇಶಿ ಮಂತ್ರಾಲಯ, ಯೋಜನೆಯಲ್ಲಿ ತಿದ್ದುಪಡಿ ಮಾಡಿದೆ. ಗೆಜೆಟೆಡ್ ಅಧಿಕಾರಿಗಳಿಂದ ಪ್ರಮಾಣ ಪತ್ರ ತರುವ ಅನಿವಾರ್ಯತೆಯನ್ನು ತೆಗೆದು ಹಾಕಲಾಗಿದೆ. ಅರ್ಜಿದಾರ ಆಧಾರ್ ಕಾರ್ಡ್ ಒಂದನ್ನು ಕಡ್ಡಾಯವಾಗಿ ನೀಡಿದ್ರೆ ಸಾಕು.

ಆಧಾರ್ ಹೊರತು 18 ವರ್ಷ ಮೇಲ್ಪಟ್ಟವರು ಎರಡು ದಾಖಲೆಗಳನ್ನು ನೀಡಬೇಕಾಗುತ್ತದೆ. ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ತಿದ್ದುಪಡಿ 2018ರ ಪ್ರಕಾರ ಗಾಜಿಯಾಬಾದ್ ಪ್ರಾದೇಶಿಕ ಕಚೇರಿಗೆ ಸೇರಿದ 13 ಜಿಲ್ಲೆಯ ಜನರು ಇದ್ರ ಲಾಭ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ 3500 ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ನೀಡಬೇಕಾಗುತ್ತದೆ. ಈ ಹಿಂದೆ 1500 ರೂಪಾಯಿಯನ್ನು ಶುಲ್ಕದ ರೂಪದಲ್ಲಿ ಪಡೆಯಲಾಗ್ತಾ ಇತ್ತು. ಅರ್ಜಿ ಸಲ್ಲಿಸಿ 30 ದಿನಕ್ಕೆ ಪಾಸ್ಪೋರ್ಟ್ ಅರ್ಜಿದಾರರ ಕೈ ಸೇರುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...