alex Certify
ಕನ್ನಡ ದುನಿಯಾ       Mobile App
       

Kannada Duniya

30 ರೂಪಾಯಿಗೆ ಸಿಗುತ್ತೆ ಹೆಡ್ ಫೋನ್

hed-pone

ಮುಂಬೈ: ಮುಂಬೈ –ಗೋವಾ ನಡುವೆ ಸಂಚರಿಸುವ ದೇಶದ ಹೈಸ್ಪೀಡ್ ಹೈಟೆಕ್ ರೈಲು ತೇಜಸ್ ನಲ್ಲಿ 30 ರೂಪಾಯಿಗೆ ಹೆಡ್ ಫೋನ್(ಇಯರ್ ಫೋನ್) ಸಿಗಲಿದೆ.

ಅತ್ಯಾಧುನಿಕ ತೇಜಸ್ ರೈಲಲ್ಲಿ ಪ್ರಯಾಣಿಕರಿಗೆ ಹೈಟೆಕ್ ಸೌಲಭ್ಯ ನೀಡಲಾಗಿದೆ. ರೈಲಿನಲ್ಲಿ ಪ್ರಯಾಣಿಕರು ಸಿನಿಮಾ ವೀಕ್ಷಿಸಲು, ಮ್ಯೂಸಿಕ್ ಕೇಳಲು ಹೆಡ್ ಫೋನ್ ಗಳನ್ನು ಇಡಲಾಗಿತ್ತು.

ಅವುಗಳನ್ನೇ ಕೆಲವು ಕದ್ದೊಯ್ದಿದ್ದರೆ, ಮತ್ತೆ ಕೆಲವರು ಹಾಳು ಮಾಡಿದ್ದರು. ಪ್ರಯಾಣಿಕರಿಗೆ ಬಳಕೆಯಾದ ಹೆಡ್ ಫೋನ್ ಗಳನ್ನು ಆರಂಭದಲ್ಲಿ ನೀಡಲಾಗಿತ್ತಾದರೂ ಅವು ಕ್ಲೀನ್ ಆಗಿಲ್ಲ ಎಂಬ ದೂರು ಪ್ರಯಾಣಿಕರಿಂದ ಕೇಳಿ ಬಂದಿತ್ತು.

ಈ ತೇಜಸ್ ರೈಲಿನ ನಿರ್ವಹಣೆ ಮಾಡುತ್ತಿರುವ ಭಾರತೀಯ ರೈಲ್ವೇ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ಪ್ರಯಾಣಿಕರಿಂದ 30 ರೂ ಪಡೆದು ಹೆಡ್ ಫೋನ್ ಗಳನ್ನು ನೀಡಲಿದೆ.

ಅವುಗಳನ್ನು ಪ್ರಯಾಣಿಕರು ತೆಗೆದುಕೊಂಡು ಹೋಗಬಹುದಾಗಿದೆ. ಜೂನ್ 19 ರಿಂದ ಈ ಹೊಸ ಯೋಜನೆ ಜಾರಿಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...