alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾಸೆಂಜರ್ ವಾಹನ ಮಾರಾಟದಲ್ಲಿ ಚೇತರಿಕೆ

ದೇಶದಲ್ಲಿ ಸತತ ಮೂರು ತಿಂಗಳ ಬಳಿಕ ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಚೇತರಿಕೆ ಕಂಡು ಬಂದಿದೆ.

ಇಂಧನ ಬೆಲೆ ಹೆಚ್ಚಳ, ವಿಮೆ ದುಬಾರಿ ನಡುವೆಯೂ ಜನ ಸಾಗಣೆ ವಾಹನಗಳ ಮಾರಾಟದಲ್ಲಿ ಶೇ.155 ರಷ್ಟು ಏರಿಕೆಯಾಗಿದ್ದು, ಅಕ್ಟೋಬರ್ ನಲ್ಲಿ ಒಟ್ಟು 284224 ವಾಹನ ಮಾರಾಟವಾಗಿದೆ.

ಸುಧಾರಿತ ಬದಲಾವಣೆಯಿಂದ ಇದರಿಂದ ವಾಣಿಜ್ಯ ವಾಹನ ತಯಾರಕರು ಮತ್ತು ಮಾರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿದೆ. ಅಷ್ಟೇ ಅಲ್ಲದೇ ಈ ಬೆಳವಣಿಗೆಯಿಂದ ಕೈಗಾರಿಕೆ ಉತ್ತೇಜಿತ ವಾತಾವರಣ ಕಂಡುಬಂದಿದೆ.

ಒಟ್ಟಾರೆ ವಾಣಿಜ್ಯ ವಾಹನಗಳ ಮಾರಾಟ ಶೇ.24.82 ಕ್ಕೆ ಹೆಚ್ಚಳವಾಗಿದ್ದು, ಅಕ್ಟೋಬರ್ ನಲ್ಲಿ 87147 ಯೂನಿಟ್ ಮಾರಾಟವಾಗಿದೆ. ಶೇ.17.23ರಷ್ಟು ದ್ವಿಚಕ್ರ ವಾಹನ ಮಾರಾಟವಾಗಿದ್ದು (2053497) ಎಲ್ಲಾ ವರ್ಗದ ವಾಹನ ಮಾರಾಟ ಶೇ.15.33ರಷ್ಟು (2494426 ಯೂನಿಟ್)ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...