alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಯಾರಿಸ್ ಎಕ್ಸ್ ಪೋದಲ್ಲಿ ಪಾಲ್ಗೊಳ್ಳುತ್ತಿಲ್ಲ ಖ್ಯಾತ ಕಂಪನಿ

Paris expo misses out on brandsಅಟೋಮೊಬೈಲ್ ಉದ್ಯಮದ ಪ್ರತಿಷ್ಟಿತ ಷೋ ಎಂದೇ ಪರಿಗಣಿಸಲಾಗಿರುವ ಪ್ಯಾರಿಸ್ ಆಟೋ ಎಕ್ಸ್ ಪೋ ಸೆಪ್ಟೆಂಬರ್ 29 ರಿಂದ ಆರಂಭವಾಗಲಿದ್ದು, ಈ ಬಾರಿ ವೋಕ್ಸ್ ವ್ಯಾಗನ್ ಪಾಲ್ಗೊಳ್ಳುತ್ತಿಲ್ಲವೆಂದು ಹೇಳಲಾಗಿದೆ.

ವೋಕ್ಸ್ ವ್ಯಾಗನ್ ನ ಸೂಪರ್ ಕಾರ್ಸ್ ಗಳಾದ ಬೆಂಟ್ಲಿ ಹಾಗೂ ಲ್ಯಾಂಬೋರ್ಗಿನಿಯ ಮಾಡೆಲ್ ಗಳು ಈ ಬಾರಿಯ ಪ್ಯಾರಿಸ್ ಆಟೋ ಎಕ್ಸ್ ಪೋ ನಲ್ಲಿ ಕಾಣಿಸಿಕೊಳ್ಳದಿರುವುದು ವಾಹನ ಪ್ರಿಯರ ನಿರಾಸೆಗೆ ಕಾರಣವಾಗಿದೆ.

ವೋಕ್ಸ್ ವ್ಯಾಗನ್ ತನ್ನ ವಾಹನಗಳ ಡಿಸೇಲ್ ಎಮಿಶನ್ ಟೆಸ್ಟ್ ಗೆ ಅನೈತಿಕ ಮಾರ್ಗ ಅನುಸರಿಸಿದೆ ಎಂಬ ಆರೋಪ ಕೇಳಿ ಬಂದಿತ್ತಲ್ಲದೇ ಈ ಕಾರಣಕ್ಕೆ ದುಬಾರಿ ದಂಡವನ್ನೂ ತೆರಬೇಕಾಗಿ ಬಂದಿತ್ತು. ಇದೀಗ ಪ್ಯಾರಿಸ್ ಆಟೋ ಎಕ್ಸ್ ಪೋ ದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸುವ ಮೂಲಕ ಮಾರುಕಟ್ಟೆ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...