alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋನ್ ಖರೀದಿ ಮಾಡಿದ್ರೆ ಸಿಗಲಿದೆ 10 ಗ್ರಾಂ ಚಿನ್ನ

ಪ್ಯಾನಾಸಾನಿಕ್ ಇಂಡಿಯಾ ತನ್ನ ಹೊಸ ಸ್ಮಾರ್ಟ್ಫೋನ್ ಪಿ 100 ಬಿಡುಗಡೆ ಮಾಡಿದೆ. ಎರಡು ಶೇಖರಣಾ ರೂಪಾಂತರವನ್ನು ಕಂಪನಿ ಮಾರುಕಟ್ಟೆಗೆ ಬಿಟ್ಟಿದೆ. 1ಜಿಬಿ ಸಾಮರ್ಥ್ಯದ ಫೋನ್ ಬೆಲೆ 5299 ರೂಪಾಯಿ. 2ಜಿಬಿ ಸಾಮರ್ಥ್ಯದ ಸ್ಮಾರ್ಟ್ಫೋನ್ ಬೆಲೆ 5999 ರೂಪಾಯಿ.

5 ಇಂಚಿನ 2.5ಡಿ ಕವರ್ಡ್ ಗ್ಲಾಸ್ ಡಿಸ್ಪ್ಲೇ ನೀಡಲಾಗಿದೆ. ಪಿ 100 ಸ್ಮಾರ್ಟ್ಫೋನ್ ಆಂಡ್ರಾಯ್ಡ್ 7.0ನಲ್ಲಿ ಕೆಲಸ ಮಾಡಲಿದೆ. ಎಲ್ ಇ ಡಿ ಫ್ಲ್ಯಾಶ್ ನೊಂದಿಗೆ 8 ಮೆಗಾಪಿಕ್ಸಲ್ ರಿಯರ್ ಕ್ಯಾಮರಾವನ್ನು ಪಿ 100 ಹೊಂದಿದೆ. 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾವನ್ನು ಅಳವಡಿಸಲಾಗಿದೆ.16ಜಿಬಿ ಇಂಟರ್ನಲ್ ಮೆಮೊರಿ ಫೋನ್ ನಲ್ಲಿದ್ದು ಅದನ್ನು 128 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ.

ಪ್ಯಾಕೆಟ್ ಮೂಡ್ ಈ ಫೋನ್ ನ ವಿಶೇಷವಾಗಿದೆ. ಪ್ಯಾಕೆಟ್ ನಲ್ಲಿ ಫೋನ್ ಇಡುತ್ತಿದ್ದಂತೆ ಅದ್ರ ರಿಂಗ್ ಟೋನ್ ದೊಡ್ಡದಾಗಲಿದೆ. ಒಮ್ಮೆ ಟಚ್ ಮಾಡಿದ ನಂತ್ರ ಫೋನ್ ಸೈಲೆಂಟ್ ಆಗಲಿದೆ. ಫೋನ್ ಬಿಡುಗಡೆ ಜೊತೆಗೆ ಕಂಪನಿ ಗೋಲ್ಡ್ ಫೆಸ್ಟಿವಲ್ ಕನ್ಸ್ಯೂಮರ್ ಆಫರ್ ಶುರು ಮಾಡಿದೆ. ಈ ಹೊಸ ಫೋನ್ ಖರೀದಿ ಮಾಡುವ ಕೆಲ ಗ್ರಾಹಕರಿಗೆ ಬಂಗಾರ ಗಿಫ್ಟ್ ರೂಪದಲ್ಲಿ ಸಿಗಲಿದೆ.

ಫೆಬ್ರವರಿ 8ರಿಂದ ಮಾರ್ಚ್ 31ರೊಳಗೆ ಫೋನ್ ಖರೀದಿ ಮಾಡಿದ ಗ್ರಾಹಕರಿಗೆ ಕಂಪನಿ ಕೂಪನ್ ನೀಡಲಿದೆ. ಕೂಪನ್ ನಲ್ಲಿ ಕೋಡ್ ಇರಲಿದ್ದು ಅದೃಷ್ಟ ಖುಲಾಯಿಸಿದ್ರೆ ವಿಜೇತರಿಗೆ 10 ಗ್ರಾಂ ಬಂಗಾರ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...