alex Certify
ಕನ್ನಡ ದುನಿಯಾ       Mobile App
       

Kannada Duniya

ಜೂ.30 ರ ನಂತ್ರ ರದ್ದಾಗಲಿದೆ ನಿಮ್ಮ ಪಾನ್ ಕಾರ್ಡ್…! ಏಕೆ ಗೊತ್ತಾ?

ಪಾನ್ ಕಾರ್ಡ್ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಮಾಡುವುದ್ರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಪ್ರತಿ ಹಣಕಾಸು ವ್ಯವಹಾರಕ್ಕೆ ಪಾನ್ ಕಾರ್ಡ್ ಅಗತ್ಯವಾಗಿ ಬೇಕು. ಶಾಪಿಂಗ್ ಗೆ ಕೂಡ ಪಾನ್ ಕಾರ್ಡನ್ನು ಸರ್ಕಾರ ಕಡ್ಡಾಯ ಮಾಡಿದೆ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಪಾನ್ ಕಾರ್ಡ್ ತೋರಿಸುತ್ತದೆ. ಆದ್ರೆ ನೀವು ಈ ಕೆಲಸ ಮಾಡದೆ ಹೋದಲ್ಲಿ ಜೂನ್ 30ರ ನಂತ್ರ ನಿಮ್ಮ ಪಾನ್ ರದ್ದಾಗಲಿದೆ.

ನಿಮ್ಮ ಪಾನ್ ಕಾರ್ಡನ್ನು ನಿಮ್ಮ ಬಳಿ ಉಳಿಸಿಕೊಳ್ಳಲು ಇದು ಕೊನೆ ಅವಕಾಶ. ಈವರೆಗೂ ಪಾನ್ ಕಾರ್ಡನ್ನು ಆಧಾರ್ ಜೊತೆ ಲಿಂಕ್ ಮಾಡಿಲ್ಲವೆಂದಾದ್ರೆ ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಆಧಾರ್ ಜೊತೆ ಪಾನ್ ನಂಬರ್ ಜೋಡಣೆ ದಿನಾಂಕವನ್ನು ಜೂನ್ 3 0ಕ್ಕೆ ಮುಂದೂಡಿತ್ತು.

ನಾಲ್ಕು ಬಾರಿ ಇಲಾಖೆ ದಿನಾಂಕವನ್ನು ವಿಸ್ತರಣೆ ಮಾಡಿದೆ. ಇದು ಕೊನೆ ಅವಕಾಶವಾಗಿದ್ದು, ಈಗ್ಲೂ ಆಧಾರ್ ಜೊತೆ ಪಾನ್ ಲಿಂಕ್ ಮಾಡದೆ ಹೋದಲ್ಲಿ ಪಾನ್ ಕಾರ್ಡ್ ರದ್ದಾಗಲಿದೆ. 3 ಕೋಟಿ ಪಾನ್ ಕಾರ್ಡ್ ಆಧಾರ್ ಜೊತೆ ಹಿಂದಿನ ವರ್ಷವೇ ಜೋಡಣೆಯಾಗಿದೆ. ಕಳೆದ ವರ್ಷ ತೆರಿಗೆ ಪಾವತಿಸುವ ಸಂದರ್ಭದಲ್ಲಿ 11.44 ಲಕ್ಷ ಪಾನ್ ಕಾರ್ಡ್ ಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...