alex Certify
ಕನ್ನಡ ದುನಿಯಾ       Mobile App
       

Kannada Duniya

ಜು.1ರ ನಂತ್ರ ರಿಜೆಕ್ಟ್ ಆಗಲಿದೆ ನಿಮ್ಮ ಪಾನ್ ಕಾರ್ಡ್

new_pan_main_1493116729_749x421

ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಜುಲೈ 1 ಕೊನೆಯ ದಿನ. ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೆಲವರಿಗೆ ಸಮಸ್ಯೆಯಾಗ್ತಾ ಇದೆ. ಇದಕ್ಕೆ ಕಾರಣ ಹೆಸರು. ಪ್ಯಾನ್ ಕಾರ್ಡಿನಲ್ಲೊಂದು ಹೆಸರು ಅಥವಾ ಸ್ಪೆಲಿಂಗ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಇನ್ನೊಂದು ಸ್ಪೆಲಿಂಗ್ ಇರೋದ್ರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಪ್ಯಾನ್ ಕಾರ್ಡ್ ನಲ್ಲಿ ಯಾವ ಸ್ಪೆಲಿಂಗ್ ಇದೆ, ಆಧಾರ್ ಕಾರ್ಡ್ ನಲ್ಲಿ ಏನಿದೆ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ. ಇದ್ರ ಜೊತೆಗೆ ಬ್ಯಾಂಕ್ ಅಕೌಂಟ್ ನಲ್ಲಿ ನಿಮ್ಮ ಹೆಸರು ಏನಿದೆ ಎಂಬುದನ್ನೂ ನೀವು ಪರೀಕ್ಷೆ ಮಾಡಿಕೊಳ್ಳಿ. ಯಾಕೆಂದ್ರೆ ಮೂರು ಕಡೆ ಬೇರೆ ಬೇರೆ ಸ್ಪೆಲಿಂಗ್ ಇದ್ದರೆ ನಿಮಗೆ ಆಧಾರ್ ಜೊತೆ ಪ್ಯಾನ್ ಲಿಂಕ್ ಕಷ್ಟವಾಗುತ್ತದೆ.

ಸ್ಪೆಲಿಂಗ್ ತಪ್ಪಿದೆ ಎಂದು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಆದಾಯ ತೆರಿಗೆ ವೆಬ್ ಸೈಟ್ ನಲ್ಲಿ ನೀಡಿರುವ ಲಿಂಕ್ ಗೆ ಹೋಗಿ ಅಲ್ಲಿ ಆಧಾರ್ ಅಥವಾ ಪ್ಯಾನ್ ಕಾರ್ಡ್ ನಲ್ಲಿರುವ ಸ್ಪೆಲಿಂಗ್ ಬದಲಾಯಿಸುವಂತೆ ನೀವು ಮನವಿ ಮಾಡಬಹುದಾಗಿದೆ.

ಒಂದು ವೇಳೆ ಜುಲೈ 1ರೊಳಗೆ ಆಧಾರ್ ಹಾಗೂ ಪ್ಯಾನ್ ಲಿಂಕ್ ಮಾಡಿಲ್ಲವೆಂದರೆ ನಿಮ್ಮ ಪ್ಯಾನ್ ಕಾರ್ಡ್ ರಿಜೆಕ್ಟ್ ಆಗಲಿದೆ. ಆಗ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಧ್ಯವಿಲ್ಲ. ಯಾಕೆಂದ್ರೆ ಇದಕ್ಕೆ ಆಧಾರ್ ಜೊತೆ ಪ್ಯಾನ್ ಬೇಕೇಬೇಕು. ಪ್ರಸ್ತುತ ದೇಶದಲ್ಲಿ 24.37 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಇದೆ. 113 ಕೋಟಿಗೂ ಹೆಚ್ಚು ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...