alex Certify
ಕನ್ನಡ ದುನಿಯಾ       Mobile App
       

Kannada Duniya

ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ಯಾ?ನೀವೇ ಚೆಕ್ ಮಾಡಿ….

pan

ಕೇಂದ್ರ ಸರ್ಕಾರ ಜುಲೈ 27ರಂದು 11.44 ಲಕ್ಷ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿದೆ. ನಿಯಮ ಉಲ್ಲಂಘಿಸಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿದ್ದವರಿಗೆ ಈ ಮೂಲಕ ಸರ್ಕಾರ ಶಾಕ್ ಕೊಟ್ಟಿದೆ. ಅಸ್ತಿತ್ವದಲ್ಲೇ ಇಲ್ಲದವರ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಲವರು ಪಾನ್ ಕಾರ್ಡ್ ಪಡೆದಿದ್ದರು.

ಅವುಗಳನ್ನು ಕೂಡ ಪತ್ತೆ ಮಾಡಿ ನಿಷ್ಕ್ರಿಯಗೊಳಿಸಲಾಗಿದೆ. ನಮ್ಮ ಪಾನ್ ಕಾರ್ಡ್ ಅಸ್ತಿತ್ವದಲ್ಲಿದ್ಯಾ? ಅಥವಾ ನಿಷ್ಕ್ರಿಯಗೊಂಡಿದ್ಯಾ ಅನ್ನೋ ಅನುಮಾನ ನಿಮ್ಮಲ್ಲೂ ಇರಬಹುದು. ಅದನ್ನು ನೀವು ಸುಲಭವಾಗಿ ಚೆಕ್ ಮಾಡಬಹುದು.

ಇದಕ್ಕಾಗಿ ಮೊದಲು www.Incometaxindiaefiling.gov.in ಗೆ ಲಾಗಿನ್ ಆಗಿ. ಇದು ಆದಾಯ ತೆರಿಗೆ ಪಾವತಿಸುವ ಸರ್ಕಾರದ ಅಧಿಕೃತ ವೆಬ್ ಸೈಟ್. Know your Pan ಅನ್ನೋ ಬಟನ್ ಮೇಲೆ ಕ್ಲಿಕ್ ಮಾಡಿ. ಅದು ಹೋಮ್ ಪೇಜ್ ನ ಎಡಭಾಗದಲ್ಲಿದೆ.

ಅಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇತರ ವಿವರಗಳು. ಫೋನ್ ನಂಬರ್ ಕೂಡ ರಿಜಿಸ್ಟರ್ ಆಗಿರಬೇಕು. ಆಗ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ. ಓಟಿಪಿಯನ್ನು ಎಂಟರ್ ಮಾಡಿದ್ರೆ ನಿಮ್ಮ ಪಾನ್ ಕಾರ್ಡ್ ಅಸ್ತಿತ್ವದಲ್ಲಿದೆಯೋ ಇಲ್ಲವೋ ಅನ್ನೋದನ್ನು ತಿಳಿಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...