alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಕಂಪನಿಗಳು ಜಮಾ ಮಾಡ್ತಿಲ್ಲ ಪಿಎಫ್ ಹಣ

ದೇಶದ ಕೆಲ ದೊಡ್ಡ ಕಂಪನಿಗಳು ನೌಕರರ ಪಿಎಫ್ ಹಣವನ್ನು ಲೂಟಿ ಮಾಡಿದೆ. 6.25 ಕೋಟಿ ರೂಪಾಯಿ ಪಿಎಫ್ ಹಣ ನಾಪತ್ತೆಯಾಗಿದೆ ಎಂಬ ಸುದ್ದಿಯನ್ನು ಇಪಿಎಫ್ಒಯ ವಾರ್ಷಿಕ ವರದಿಯಲ್ಲಿ ಬಹಿರಂಗವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಹೆಸರು ಮಾಡಿರುವ ದೊಡ್ಡ ಕಂಪನಿಗಳು ನೌಕರರ ಹೆಸರಿನಲ್ಲಿ ಪಿಎಫ್ ಹಣ ಜಮಾ ಮಾಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಮೂಲಗಳ ಪ್ರಕಾರ 6.25 ಕೋಟಿ ರೂಪಾಯಿ ಇಪಿಎಫ್ ಒನಲ್ಲಿ ಡೀಫಾಲ್ಟ್ ಆಗಿದೆ. 1539 ಸರ್ಕಾರಿ ಕಂಪನಿಗಳು 1360 ಕೋಟಿ ಪಿಎಫ್ ಹಣವನ್ನು ಜಮಾ ಮಾಡಿಲ್ಲ. ಖಾಸಗಿ ಕಂಪನಿಗಳು 4651 ಕೋಟಿ ಪಿಎಫ್ ಹಣವನ್ನು ಜಮಾ ಮಾಡಿಲ್ಲ. ಯಾವ ಕಂಪನಿ ಪಿಎಫ್ ಹಣ ಜಮಾ ಮಾಡಿಲ್ಲ ಎಂಬುದು ಈಗಿನ ಪ್ರಶ್ನೆ. ಇದು ನೌಕರರ ಆತಂಕಕ್ಕೆ ಕಾರಣವಾಗಿದೆ. ನೌಕರರು ಆತಂಕಪಡುವ ಅಗತ್ಯವಿಲ್ಲ. ಸುಲಭವಾಗಿ ಪಿಎಫ್ ಹಣ ಜಮಾ ಆಗಿದೆಯಾ ಇಲ್ವಾ ಎಂಬುದನ್ನು ನೋಡಬಹುದು.

ನೌಕರರಿಗಾಗಿಯೇ ಇಪಿಎಫ್ಒ ಮಿಸ್ಡ್ ಕಾಲ್ ಸೇವೆ ಶುರು ಮಾಡಿದೆ. 011-2290-1406 ನಂಬರ್ ಗೆ ನೀವು ಮಿಸ್ಡ್ ಕಾಲ್ ನೀಡಬೇಕು. 2 ಸೆಕೆಂಡ್ ಗೆ ಕಾಲ್ ಕಟ್ ಆಗುತ್ತದೆ. ನಂತ್ರ ನಿಮ್ಮ ನಂಬರ್ ಗೆ ಸಂದೇಶ ಬರುತ್ತದೆ. ನಿಮ್ಮ ಪಿಎಫ್ ನಲ್ಲಿ ಎಷ್ಟು ಹಣವಿದೆ, ಯಾವಾಗ ಹಣ ಎಷ್ಟು ಜಮಾ ಆಗಿದೆ ಎಂಬೆಲ್ಲ ವಿವರ ನಿಮಗೆ ಸಿಗಲಿದೆ. ನೆನಪಿರಲಿ ಪಿಎಫ್ ಖಾತೆ ತೆರೆಯುವಾಗ ನೀಡಿದ ಫೋನ್ ನಂಬರ್ ನಲ್ಲಿಯೇ ನೀವು ಮಿಸ್ಡ್ ಕಾಲ್ ನೀಡಬೇಕಾಗುತ್ತದೆ.

ಮಿಸ್ಡ್ ಕಾಲ್ ಜೊತೆ ಇಪಿಎಫ್ ಒ ಆ್ಯಪ್ ಸೇವೆ ಕೂಡ ಶುರು ಮಾಡಿದೆ. ಇಪಿಎಫ್ಒ ಅಧಿಕೃತ ವೆಬ್ ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ನೀವು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಇಲ್ಲಿ ಪಿಎಫ್ ನ ಎಲ್ಲ ಮಾಹಿತಿ ಸಿಗಲಿದೆ.

ಇದಲ್ಲದೆ ಮೆಸ್ಸೇಜ್ ಮೂಲಕ ಹಾಗೂ ಯುಎಎನ್ ನಂಬರ್ ಮೂಲಕ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಶೀಘ್ರ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ. ನಿಮ್ಮ ಕಂಪನಿ ಕೂಡ ನಿಮಗೆ ಮೋಸ ಮಾಡ್ತಿದೆಯಾ ಎಂಬುದನ್ನು ತಿಳಿದುಕೊಳ್ಳಿ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...