alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷ್ಕ್ರಿಯವಾದ್ವು 11.44 ಲಕ್ಷ ಪಾನ್ ಕಾರ್ಡ್

pan-crd

ನವದೆಹಲಿ: ದೇಶದಲ್ಲಿ ಸುಮಾರು 11.44 ಲಕ್ಷ ನಕಲಿ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ತಿಳಿಸಿದ್ದಾರೆ.

ಒಬ್ಬರು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಹೊಂದಿದ್ದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. 11.44 ಲಕ್ಷ ನಕಲಿ ಪಾನ್ ಕಾರ್ಡ್ ಗಳನ್ನು ಪತ್ತೆ ಮಾಡಲಾಗಿದೆ ಎಂದು ರಾಜ್ಯಸಭೆಯಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ.

ವ್ಯಕ್ತಿಯ ಹಣಕಾಸು ವಹಿವಾಟು ತೆರಿಗೆ ಮಾಹಿತಿಗೆ ಪಾನ್ ಕಾರ್ಡ್ ಕೀಲಿ ಕೈ ಇದ್ದಂತೆ. ಒಬ್ಬರಿಗೆ 1 ಪಾನ್ ಕಾರ್ಡ್ ಎಂಬ ನಿಯಮವಿದೆ. ಇದನ್ನು ಯಾರೂ ಮೀರುವಂತಿಲ್ಲ ಎಂದು ಹೇಳಿದ್ದಾರೆ.

ಇದುವರೆಗೆ 11,44,211 ನಕಲಿ ಪಾನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...