alex Certify
ಕನ್ನಡ ದುನಿಯಾ       Mobile App
       

Kannada Duniya

ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಆಹಾರ ಆರ್ಡರ್ ಮಾಡಿದ್ರೆ ನೀಡಬೇಕು ವಿತರಣಾ ಶುಲ್ಕ

ಇನ್ಮುಂದೆ ಐಆರ್ಸಿಟಿಸಿ ವೆಬ್ಸೈಟ್ ನಲ್ಲಿ ಆಹಾರ ಆರ್ಡರ್ ಮಾಡಿದ್ರೆ ವಿತರಣಾ ಶುಲ್ಕವನ್ನು ನೀಡಬೇಕಾಗುತ್ತದೆ. ಐಆರ್ಸಿಟಿಸಿ ಮೂಲಕ ಬೇರೆ ಹೊಟೇಲ್ ಅಥವಾ ರೆಸ್ಟೋರೆಂಟ್ ನಿಂದ ಆಹಾರ ಆರ್ಡರ್ ಮಾಡಿದ್ರೆ ಈ ಶುಲ್ಕವನ್ನು ನೀಡಬೇಕಾಗುತ್ತದೆ.

ಆಹಾರ ವಿತರಣೆ ಮಾಡಲು ಐಆರ್ಸಿಟಿಸಿ ಲಾಜಿಸ್ಟಿಕ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಐಆರ್ಸಿಟಿಸಿ ಅಧಿಕೃತ ವೆಬ್ಸೈಟ್ ಮೂಲಕ ರೆಸ್ಟೋರೆಂಟ್ ಅಥವಾ ಹೊಟೇಲ್ ನಲ್ಲಿ ಆಹಾರ ಆರ್ಡರ್ ಮಾಡಿದ್ರೆ ಅದು ಕಂಪನಿಗೆ ತಲುಪಲಿದೆ. ಕಂಪನಿ ಗ್ರಾಹಕರಿಗೆ ಲಾಜಿಸ್ಟಿಕ್ ಕಂಪನಿ ಮೂಲಕ ಆಹಾರವನ್ನು ವಿತರಣೆ ಮಾಡಲಿದೆ. ಈ ವೇಳೆ ಗ್ರಾಹಕರು 15 ರೂಪಾಯಿಯನ್ನು ವಿತರಣಾ ಶುಲ್ಕವಾಗಿ ನೀಡಬೇಕಾಗುತ್ತದೆ.

ಐಆರ್ಸಿಟಿಸಿ www.ecatering.irctc.co.in ವೆಬ್ಸೈಟ್ ಹಾಗೂ ಮೊಬೈಲ್ ಆ್ಯಪ್ eCatering – Food on Track ಮೂಲಕ ಆಹಾರ ಸರಬರಾಜು ಮಾಡುತ್ತದೆ. ಐಆರ್ಸಿಟಿಯ ಇ ಕ್ಯಾಟರಿಂಗ್ ಮೂಲಕ ನೀವು 500ಕ್ಕೂ ಹೆಚ್ಚು ಹೊಟೇಲ್ ಗಳಿಂದ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ. ಆರ್ಡರ್ ಮಾಡಿದ ನಂತ್ರ ಆಹಾರ ನೇರವಾಗಿ ನೀವಿರುವ ರೈಲ್ವೆ ನಿಲ್ದಾಣದ ನಿಮ್ಮ ಸೀಟಿನ ಬಳಿ ಬರಲಿದೆ. ಈ ಸೇವೆ 10 ನಂಬರ್ ನ ಪಿಎನ್ಆರ್ ಮೂಲಕ ಕೆಲಸ ನಿರ್ವಹಿಸುತ್ತದೆ.

ಐಆರ್ಸಿಟಿಸಿ ಹೊರತು ಬೇರೆ ಅನೇಕ ಕಂಪನಿಗಳು ರೈಲಿನಲ್ಲಿ ಆಹಾರ ಒದಗಿಸುವ ಸೇವೆ ಶುರು ಮಾಡಿವೆ. ಇದಕ್ಕೆ ತಡೆ ನೀಡಲು ಆಹಾರ ವಿತರಣೆ ಜವಾಬ್ದಾರಿಯನ್ನು ಐಆರ್ಸಿಟಿಸಿ ಒಂದೇ ಕಂಪನಿಗೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...