alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ ಬಿ ಐ ನೀಡ್ತಿದೆ ಹಣ ಗಳಿಸುವ ಅವಕಾಶ

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಣ ಸಂಪಾದಿಸಲು ಭರ್ಜರಿ ಅವಕಾಶ ನೀಡ್ತಿದೆ. ಬ್ಯಾಂಕ್ 8 ನಗರಗಳಿಗೆ ಈ ಕೊಡುಗೆ ನೀಡ್ತಿದೆ. ಈ ಆಫರ್ ನಲ್ಲಿ ಯುವಕರು ಬ್ಯಾಂಕ್ ಕೆಲಸ ಮಾಡಿ ಹಣ ಸಂಪಾದಿಸಬಹುದಾಗಿದೆ. ಎಸ್ಬಿಐ ಬಿಸಿನೆಸ್ ಕರೆಸ್ಪಾಂಡೆಂಟ್ ಗೆ ಅಧಿಸೂಚನೆ ಹೊರಡಿಸಿದೆ.

ಬ್ಯಾಂಕ್ ಗೆ 8 ನಗರಗಳಲ್ಲಿ ಬ್ಯಾಂಕ್ ಮಿತ್ರರು ಬೇಕಾಗಿದ್ದಾರೆ. ನಿಶ್ಚಿತ ಸಂಬಳದ ಜೊತೆಗೆ ಇನ್ಸೆಂಟಿವ್ ಪಡೆಯಲು ಅವಕಾಶವನ್ನು ಬ್ಯಾಂಕ್ ನೀಡ್ತಿದೆ. ಆನ್ಲೈನ್ ಅಪ್ಲಿಕೇಷನ್ ಜೊತೆ ಬ್ಯಾಂಕ್ ಶಾಖೆಗೆ ಹೋಗಿ ಕೂಡ ಅರ್ಜಿ ಸಲ್ಲಿಸಬಹುದು. ಉತ್ತರ ಪ್ರದೇಶ, ಬಿಹಾರ, ದೆಹಲಿ, ಮಹಾರಾಷ್ಟ್ರ, ಛತ್ತೀಸ್ಗಢ, ಅಸ್ಸಾಂ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶದ 43 ಕ್ಷೇತ್ರಗಳಲ್ಲಿ ಬ್ಯಾಂಕ್ ಸ್ನೇಹಿತರ ಅಗತ್ಯವಿರುತ್ತದೆ.

ಬ್ಯಾಂಕ್ ಸ್ನೇಹಿತರಾಗಿ ಕೆಲಸ ಮಾಡುವವರು ಬ್ಯಾಂಕ್ ಖಾತೆ ತೆರೆಯುವುದ್ರಿಂದ ಹಿಡಿದು ಹಣದ ವಹಿವಾಟು ನಡೆಸಲು ಜನರಿಗೆ ನೆರವಾಗುತ್ತಾರೆ. ಮೈಕ್ರೋ ಇನ್ಶುರೆನ್ಸ್ ಪಾಲಿಸಿಯನ್ನು ಮಾರಾಟ ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಕೂಡ ಮಾರಾಟ ಮಾಡ್ತಾರೆ. ಬ್ಯಾಂಕ್ ಸ್ನೇಹಿತನಾಗಿ ಕೆಲಸ ಮಾಡುವ ವ್ಯಕ್ತಿಗೆ 2 ಸಾವಿರದಿಂದ 5 ಸಾವಿರದವರೆಗೆ ಸಂಬಳವಿರುತ್ತದೆ. ಜೊತೆಗೆ ಪ್ರತಿಯೊಂದು ಹಣ ವರ್ಗಾವಣೆಗೆ ಕಮಿಷನ್ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...