alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ದೇಶಾದ್ಯಂತ ATM ಬಂದ್

atm-rb

ಮುಂಬೈ: ಕಳೆದ 3 ದಿನಗಳಿಂದ WannaCry ransomware ಉಪಟಳದಿಂದ ಕಂಪ್ಯೂಟರ್ ಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರಿದೆ.

ಈ ಹಿನ್ನಲೆಯಲ್ಲಿ ದೇಶಾದ್ಯಂತ ಬಹುತೇಕ ಎ.ಟಿ.ಎಂ.ಗಳನ್ನು ಬಂದ್ ಮಾಡಲಾಗಿದೆ. ಓಪನ್ ಆಗಿರುವ ಎ.ಟಿ.ಎಂ.ಗಳಲ್ಲಿ ಸಾಫ್ಟ್ ವೇರ್ ಪ್ರಾಬ್ಲಂನಿಂದಾಗಿ ಹಣ ಸಿಗುತ್ತಿಲ್ಲ.

ವಿಂಡೋಸ್ ಆಪರೇಟಿಂಗ್ ಸಿಸ್ಟಂ ಅಪ್ ಡೇಟ್ ಆಗಬೇಕಿದ್ದು, ಈ ಕೆಲಸ ಪೂರ್ಣಗೊಳ್ಳುವವರೆಗೆ ಎ.ಟಿ.ಎಂ. ಬಂದ್ ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದು, ಹಣ ಸಿಗದೇ ಗ್ರಾಹಕರು ಪರದಾಡುವಂತಾಗಿದೆ.

ಎ.ಟಿ.ಎಂ.ಗಳು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಗ್ರಾಹಕರು, ಒಂದು ಎ.ಟಿ.ಎಂ.ನಿಂದ ಮತ್ತೊಂದು ಎ.ಟಿ.ಎಂ.ಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ದೇಶದಲ್ಲಿ ಸುಮಾರು ಶೇ. 70 ರಷ್ಟು ಎ.ಟಿ.ಎಂ.ಗಳು ವಿಂಡೋಸ್ XP ಮೂಲಕ ಕಾರ್ಯನಿರ್ವಹಿಸುತ್ತವೆ. ಇದಕ್ಕೆ ಸೆಕ್ಯೂರಿಟಿ ವ್ಯವಸ್ಥೆ ಇಲ್ಲದ ಕಾರಣ, ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ.

ಇದೇ ಕಾರಣಕ್ಕೆ ಎ.ಟಿ.ಎಂ. ಅಪ್ ಡೇಟ್ ಆಗುವವರೆಗೆ ಸೇವೆ ನಿಲ್ಲಿಸಬೇಕು. ಹೀಗಿದ್ದರೂ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಆರ್.ಬಿ.ಐ. ಸೂಚನೆ ನೀಡಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...