alex Certify
ಕನ್ನಡ ದುನಿಯಾ       Mobile App
       

Kannada Duniya

ತೈಲ ಬೆಲೆ ಏರಿಕೆ, ಇಲ್ಲಿದೆ ಶಾಕಿಂಗ್ ನ್ಯೂಸ್

ದುಬೈ: ತೈಲ ರಫ್ತುದಾರ ರಾಷ್ಟ್ರಗಳ ಒಕ್ಕೂಟವಾಗಿರುವ ಒಪೆಕ್ ತೈಲೋತ್ಪಾದನೆಯನ್ನು ಕಡಿತಗೊಳಿಸಿದೆ. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಕಡಿಮೆಯಾಗಿ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗ್ತಿದೆ.

2017 ರ ಜನವರಿಯಿಂದ ತೈಲೋತ್ಪಾದನೆಯನ್ನು ಕಡಿತಗೊಳಿಸಿರುವ ಒಪೆಕ್ ರಾಷ್ಟ್ರಗಳು 2018 ರ ಡಿಸೆಂಬರ್ ವರೆಗೂ ತೈಲೋತ್ಪಾದನೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಸಾಧ್ಯತೆ ಇದೆ.

ತೈಲ ಪೂರೈಕೆ ದೇಶಗಳ ಒಕ್ಕೂಟದಲ್ಲಿ ಸಕ್ರಿಯವಾಗಿರುವ ಸೌದಿ ಅರೇಬಿಯಾ ತೈಲದ ಬೆಲೆ ಏರಿಕೆಗೆ ಪೂರಕವಾದ ಬೆಂಬಲವನ್ನು ನೀಡುತ್ತಿದೆ. ಕಚ್ಚಾ ತೈಲದ ಬೆಲೆ ಈ ವರ್ಷ ಪ್ರತಿ ಬ್ಯಾರೆಲ್ ಗೆ 73 ಡಾಲರ್ ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ 80 -100 ಡಾಲರ್ ವರೆಗೂ ದರ ಏರಿಕೆಯಾಗುವ ನಿರೀಕ್ಷೆ ಇದೆ. ಹೀಗಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಲಿದೆ.

ಇಂದು ಮುಂಬೈನಲ್ಲಿ ಪೆಟ್ರೋಲ್ ದರ 81.92 ರೂ., ಕೋಲ್ಕತ್ತಾದಲ್ಲಿ 76.77 ರೂ., ದೆಹಲಿಯಲ್ಲಿ 74.07 ರೂ. ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...