alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಹಣ ಉಳಿಕೆ ಕುರಿತಂತೆ ‘ಬಹಿರಂಗ’ವಾಗಿದೆ ಕುತೂಹಲಕಾರಿ ಮಾಹಿತಿ

ನಿವೃತ್ತಿಯ ನಂತರದ ಬದುಕಿನ ಜಂಜಾಟಗಳನ್ನ ಕಳೆದುಕೊಂಡು ಸುಖಕರ ಜೀವನವನ್ನು ಕಳೆಯಬೇಕು ಅಂತ ಎಲ್ಲರೂ ಆಸೆ ಪಡ್ತಾರೆ. ಆದ್ರೆ ನಿವೃತ್ತಿಯ ನಂತರದ ದಿನಗಳಿಗಾಗಿ ಉಳಿತಾಯ ಮಾಡಬೇಕು ಅಂತ ಭಾರತದಲ್ಲಿ ಗಂಭೀರವಾಗಿ ಯೋಚನೆ ಮಾಡುವವರು ಕಡಿಮೆ.

ಈ ವಿಚಾರವಾಗಿ ಎಚ್ಎಸ್ಬಿಸಿ ನಡೆಸಿರುವ ಸಮೀಕ್ಷೆಯೊಂದು ಆಶ್ಚರ್ಯಕರ ವರದಿಯನ್ನು ನೀಡಿದೆ. ಫ್ಯೂಚರ್ ಆಫ್ ರಿಟೈರ್ ಮೆಂಟ್ ಬ್ರಿಡ್ಜಿಂಗ್ ದ ಗ್ಯಾಪ್ ಎಂಬ ಸಮೀಕ್ಷೆ ಗಂಭೀರವಾದ ವಿಚಾರಗಳ ಮೇಲೆ ಬೆಳಕು ಚೆಲ್ಲಿದೆ.

ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ 33ರಷ್ಟು ಮಂದಿ ಮಾತ್ರ ನಿವೃತ್ತಿಯ ನಂತರದ ದಿನಗಳಿಗಾಗಿ ಉಳಿತಾಯ ಯೋಜನೆಯನ್ನು ಮಾಡ್ತಾರಂತೆ. ತಮ್ಮ ಆದಾಯದ ಒಂದು ಭಾಗವನ್ನು ನಿವೃತ್ತಿಯ ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳಿಗಾಗಿ ಬಳಕೆ ಮಾಡಿಕೊಳ್ತಾರಂತೆ.

ಉಳಿದ ಶೇಕಡಾ 65 ಭಾಗದಷ್ಟು ಭಾರತೀಯರು ತಮ್ಮ ಆದಾಯವನ್ನು ರಿಟೈರ್ ಮೆಂಟ್ ಯೋಜನೆಯ ಹೊರತಾಗಿ ತಮ್ಮ ಆರ್ಥಿಕ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಳ್ಳೋದ್ರಲ್ಲಿ ಕಳೆದುಬಿಡ್ತಾರಂತೆ.

ಶೇಕಡಾ 75ರಿಂದ 85ರಷ್ಟು ಆದಾಯ ಸದ್ಯದ ಖರ್ಚು ಬಾಬ್ತುಗಳಿಗೆ ಸರಿ ಹೊಂದುತ್ತೆ. ಭವಿಷ್ಯದ ಬಗ್ಗೆ ಮುಂದೆ ಯೋಚನೆ ಮಾಡೋಣ ಅನ್ನೋ ಸ್ಥಿತಿಯಲ್ಲಿ ಖರ್ಚು ಮಾಡಿಬಿಡ್ತಾರಂತೆ. ಇಂದಿನ ಖುಷಿಯನ್ನು ಅನುಭವಿಸುವ ಭರದಲ್ಲಿ 60ರ ನಂತರದ ಜೀವನವನ್ನು ಮರೆತು ಬಿಡುವ ಮಂದಿಯ ಸಂಖ್ಯೆ ಭಾರತದಲ್ಲಿ ಹೆಚ್ಚಿದೆಯಂತೆ.

ಭಾರತದ ಜನಸಂಖ್ಯೆಯ ಶೇಕಡಾ 56ರಷ್ಟು ಮಂದಿ ದಿನಗೂಲಿಯನ್ನು ನಂಬಿ ತುತ್ತಿನ ಚೀಲ ತುಂಬಿಸಿಕೊಳ್ತಿರೋದ್ರಿಂದ ಭವಿಷ್ಯದ ಉಳಿತಾಯ ಯೋಜನೆಗಳ ಬಗ್ಗೆ ಯೋಚಿಸುತ್ತಿಲ್ಲ. ಶೇಕಡಾ 45ರಷ್ಟು ಮಂದಿ ಇಂದಿನ ಜೀವನದ ಖುಷಿಯನ್ನು ಸವಿಯೋದಕ್ಕೆ ಅದ್ಯತೆ ನೀಡ್ತಿದ್ದಾರಂತೆ.

ಆರ್ಥಿಕ ಸ್ಥಿತಿಗತಿಗಳು ಸುಧಾರಣೆಯಾಗದ ಕಾರಣ 60ರ ನಂತರದಲ್ಲೂ ಕೆಲಸ ಮುಂದುವರೆಸಬೇಕು ಅನ್ನೋರ ಸಂಖ್ಯೆ ಶೇಕಡಾ 69ರಷ್ಟಿದೆ. ಒಂದು ಹಂತದವರೆಗು ಕೆಲಸ ಮಾಡಿ ಆನಂತರ ಹೊಸ ಉದ್ದಿಮೆಯನ್ನು ಶುರುಮಾಡಬೇಕು ಅನ್ನುವವರ ಸರಾಸರಿ ಶೇಕಡಾ 54ರಷ್ಟಿದೆಯಂತೆ.

ಕೇವಲ ಭಾರತ ಮಾತ್ರವಲ್ಲ. ವಿಶ್ವದ ನಾನಾ ದೇಶಗಳಲ್ಲಿ ಈ ಸಮೀಕ್ಷೆಯನ್ನ ಆನ್ಲೈನ್ ಮೂಲಕ ನಡೆಸಲಾಗಿದ್ದು, ನಿವೃತ್ತಿಯ ನಂತರದ ಜೀವನದ ಬಗ್ಗೆ ಗಂಭೀರವಾಗಿ ಯೋಚಿಸುವವರ ಸಂಖ್ಯೆ ತುಂಬಾ ಕಡಿಮೆ ಇದೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...