alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ಗೂ ಬಂತು ಉದ್ರಿ ವ್ಯವಸ್ಥೆ

ಆನ್ಲೈನ್ ಸೂಪರ್ ಮಾರ್ಕೆಟ್ ಸರ್ವೀಸ್ groffers ಪೋಸ್ಟ್ ಪೇಯ್ಡ್ ದಿನಸಿ ಶಾಪಿಂಗ್ ಗಾಗಿ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಜನಸಾಮಾನ್ಯರಿಗೂ ಈ ಸೇವೆ ತಲುಪಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಬಹಳ ಸರಳಗೊಳಿಸಲಾಗಿದೆ. ಇನ್ಮುಂದೆ ಆನ್ಲೈನ್ ಮೂಲಕವೂ ನೀವು ಉದ್ರಿ ಪಡೆದು ದಿನಸಿ ಖರೀದಿ ಮಾಡಬಹುದಾಗಿದೆ.

ಈ ಹೊಸ ಯೋಜನೆ ಪ್ರಕಾರ ಗ್ರಾಹಕ ಪ್ರತಿದಿನ groffersನಲ್ಲಿ ಕನಿಷ್ಠ ಮೊತ್ತದ ದಿನಸಿಯನ್ನು ಖರೀದಿ ಮಾಡಬಹುದಾಗಿದೆ. ತಿಂಗಳ ಕೊನೆಯಲ್ಲಿ ಎಲ್ಲ ದಿನಸಿಯ ಹಣವನ್ನು ಪಾವತಿ ಮಾಡಬಹುದಾಗಿದೆ. ದಿನಸಿ ಖರೀದಿ ಮಾಡಿದ ತಕ್ಷಣ ಹಣ ಪಾವತಿ ಮಾಡಬೇಕೆಂಬ ಚಿಂತೆ ಇದ್ರಲ್ಲಿಲ್ಲ. ಯಾವಾಗ ಬೇಕಾದ್ರೂ ಎಷ್ಟು ಬೇಕಾದ್ರೂ ದಿನಸಿ ಖರೀದಿ ಮಾಡಬಹುದು. ತಿಂಗಳು ಪೂರ್ತಿ ಬಂದ ಬಿಲ್ಲನ್ನು ತಿಂಗಳ ಕೊನೆಯಲ್ಲಿ ಪಾವತಿಸಿದ್ರೆ ಮುಗೀತು.

ಇದೊಂದು ವಿಶಿಷ್ಠ ಸೇವೆಯಾಗಿದೆ. ಕಿರಾಣಿ ಖರೀದಿಯನ್ನು ಸುಲಭ ಮಾಡುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಹ ಸಂಸ್ಥಾಪಕರು ತಿಳಿಸಿದ್ದಾರೆ. ಆರಂಭದಲ್ಲಿ ಇದು ನಿಯಮಿತ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಎರಡನೇ ಹಂತದಲ್ಲಿ ಎಲ್ಲ ಗ್ರಾಹಕರಿಗೂ ಪೋಸ್ಟ್ ಪೇಯ್ಡ್ ಕಿರಾಣಿಯ ಈ ಸರಳ ವ್ಯವಸ್ಥೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...