alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ನಲ್ಲಿ ಸಿಗ್ತಿದೆ ಅಂತ್ಯಸಂಸ್ಕಾರ ಕಿಟ್….ಬೆಲೆ ಎಷ್ಟು ಗೊತ್ತಾ?

ಪರಿವರ್ತನೆ ಜಗದ ನಿಯಮ. ಜಗತ್ತು ವೇಗವಾಗಿ ಆಧುನಿಕತೆಯತ್ತ ಓಡ್ತಿದೆ. ಇದ್ರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹಳ್ಳಿಗಳು ನಗರಗಳಾಗಿ, ನಗರಗಳು ಮಹಾ ನಗರಗಳಾಗಿ ಬೆಳೆಯುತ್ತಿವೆ. ಡಿಜಿಟಲ್ ಭಾರತ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ಸಿಗ್ತಿದೆ.

ಸ್ನೇಹಿತರು, ಸಂಬಂಧಿಕರೆಲ್ಲ ಸೇರಿ ಮಾರುಕಟ್ಟೆಗೆ ಹೋಗಿ ವಸ್ತುಗಳ ಖರೀದಿ ಈಗ ಕಡಿಮೆಯಾಗಿದೆ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಬಟ್ಟೆ ಸೇರಿದಂತೆ ಎಲ್ಲ ವಸ್ತುಗಳೂ ಸಿಗ್ತಿವೆ. ನಾವು ಊಹಿಸಲಾಗದ ವಸ್ತುಗಳು ಕೂಡ ಆನ್ಲೈನ್ ನಲ್ಲಿ ಸಿಗ್ತಿವೆ. ಯಸ್, ಜನಿಸಿದ ಮೇಲೆ ಸಾವು ನಿಶ್ಚಿತ. ಅಂತ್ಯ ಸಂಸ್ಕಾರದ ವೇಳೆ ಕೆಲವೊಂದು ವಸ್ತುಗಳ ಅಗತ್ಯವಿದೆ.

ಮನೆಯಲ್ಲಿ ಸಾವಾದ ವೇಳೆ ದುಃಖದಲ್ಲಿರುವವರ ಕೆಲಸವನ್ನು ಆನ್ಲೈನ್ ಕಂಪನಿಗಳು ಸುಲಭ ಮಾಡಿವೆ. ಹಳ್ಳಿಯಂತೆ ಅಂತ್ಯಸಂಸ್ಕಾರಕ್ಕೆ ಬೇಕಾಗುವ ವಸ್ತುಗಳು ನಗರದಲ್ಲಿ ಸಿಗೋದು ಕಷ್ಟ. ಕೆಲವರಿಗೆ ಅಂತ್ಯ ಸಂಸ್ಕಾರಕ್ಕೆ ಏನೆಲ್ಲ ವಸ್ತುಗಳು ಬೇಕು ಎಂಬುದು ತಿಳಿದಿರುವುದಿಲ್ಲ. ಅಂತವರು ಆನ್ಲೈನ್ ನಲ್ಲಿ ಅಂತ್ಯಸಂಸ್ಕಾರದ ವಸ್ತುಗಳನ್ನು ಬುಕ್ ಮಾಡಿದ್ರೆ ಸಾಕು.

ಅಮೆಜಾನ್ ಮಾರ್ಚ್ 4ರಿಂದ ಈ ಸೇವೆಯನ್ನೂ ಶುರು ಮಾಡಿದೆ. ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ಎಲ್ಲ ವಸ್ತುಗಳ ಕಿಟ್ ಅಮೆಜಾನ್ ನಲ್ಲಿ ಸಿಗ್ತಿದೆ. 2999 ರೂಪಾಯಿಗೆ ಅಮೆಜಾನ್ ನಲ್ಲಿ ನೀವು ವಸ್ತುಗಳನ್ನು ಪಡೆಯಬಹುದಾಗಿದೆ. ಅಮೆಜಾನ್ ಗುಣಮಟ್ಟದ, ಕಡಿಮೆ ಬೆಲೆಯ ಅಂತ್ಯಸಂಸ್ಕಾರದ ಕಿಟ್ ನಮ್ಮಲ್ಲಿ ಲಭ್ಯ ಎನ್ನುತ್ತಿದೆ. ಇದಕ್ಕೆ ಸಾಕಷ್ಟು ರಿವ್ಯೂ ಕೂಡ ಬಂದಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...