alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಬುಕ್ ಮಾಡಿದವನಿಗೆ ಆಘಾತ

ಮುಂಬೈ: ಆನ್ ಲೈನ್ ಶಾಪಿಂಗ್ ಮಾಡಿದವರಿಗೆ ಇತ್ತೀಚೆಗೆ ವಿಚಿತ್ರ ಅನುಭವಗಳಾಗ್ತಿವೆ. ವಸ್ತುವೊಂದನ್ನು ಬುಕ್ ಮಾಡಿದವರಿಗೆ ಮತ್ತೇನೋ ಬಂದ ಅನೇಕ ಘಟನೆ ನಡೆದಿವೆ. ಅಂತಹುದೇ ಸಂಗತಿಯೊಂದರ ಮಾಹಿತಿ ಇಲ್ಲಿದೆ.

ಮಹಾರಾಷ್ಟ್ರದ ಕಲ್ಯಾಣ್ ನಿವಾಸಿ ರಾಕೇಶ್, ಆನ್ ಲೈನ್ ಮಾರಾಟ ತಾಣ ಅಮೆಜಾನ್ ನಲ್ಲಿ ಸ್ಮಾರ್ಟ್ ಫೋನ್ ಬುಕ್ ಮಾಡಿದ್ದು ಅವರಿಗೆ ಕಲ್ಲು ಬಂದಿದೆ.

ಡಿಸೆಂಬರ್ 21 ರಂದು ರಾಕೇಶ್ ಅಮೆಜಾನ್ ನಲ್ಲಿ 33,000 ರೂ. ಬೆಲೆಯ ಸ್ಮಾರ್ಟ್ ಫೋನ್ ಬುಕ್ ಮಾಡಿದ್ದು, ಡಿಸೆಂಬರ್ 23 ರಂದು ಡೆಲಿವರಿ ಬಾಯ್ ಪ್ಯಾಕ್ ಮಾಡಿದ್ದ ಬಾಕ್ಸ್ ತೆಗೆದುಕೊಂಡು ಮನೆ ಬಾಗಿಲಿಗೆ ಬಂದಿದ್ದಾರೆ.

ಖುಷಿಯಿಂದ ರಾಕೇಶ್ ಬಾಕ್ಸ್ ತೆರೆದು ನೋಡಿದಾಗ ಫೋನ್ ಬದಲಿಗೆ ಕಲ್ಲು ಕಂಡು ಬಂದಿದೆ. ಡೆಲಿವರಿ ಬಾಯ್ ಗೆ ಪ್ರಶ್ನಿಸಿದಾಗ ಆತ ತನಗೇನೂ ತಿಳಿದಿಲ್ಲವೆಂದು ಉತ್ತರಿಸಿದ್ದಾನೆ.

ಕೂಡಲೇ ಬಾಕ್ಸ್ ಮತ್ತು ಕಲ್ಲಿನ ಫೋಟೋ ತೆಗೆದ ರಾಕೇಶ್, ಕಂಪನಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕಂಪನಿಯವರು ತನಿಖೆಗಾಗಿ ರಾಕೇಶ್ ಅವರ ಆಧಾರ್ ಕಾರ್ಡ್ ಮಾಹಿತಿ ಕೇಳಿದ್ದಾರೆ. ಆದರೆ, ಇಷ್ಟು ದಿನಗಳಾದರೂ ರಾಕೇಶ್ ಅವರಿಗೆ ಯಾವುದೇ ಪ್ರತಿಕ್ರಿಯೆ ಕಂಪನಿಯಿಂದ ಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...