alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ವೇಳೆ ಎಚ್ಚರ

ರೈಲ್ವೆ ಸಚಿವ ಪಿಯುಶ್ ಗೋಯಲ್ ಬುಧವಾರ ಸಂಸತ್ ನಲ್ಲಿ ಮಹತ್ವದ ಮಾಹಿತಿಯೊಂದನ್ನು ಹೇಳಿದ್ದಾರೆ. ಸಚಿವಾಲಯ 19 ಆನ್ಲೈನ್ ಸೈಟ್ ಗಳನ್ನು ಬ್ಲಾಕ್ ಮಾಡಿದೆ ಎಂದು ಸಚಿವರು ಹೇಳಿದ್ದಾರೆ. ತತ್ಕಾಲ್ ಬುಕ್ಕಿಂಗ್ ವೇಳೆ ಈ ಸೈಟ್ ಗಳಿಂದ ತೊಂದರೆಯಾಗ್ತಿತ್ತು. ಹಾಗಾಗಿ ಸೈಟ್ ಬ್ಲಾಕ್ ಮಾಡಲಾಗಿದೆ ಎಂದವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬುಕ್ಕಿಂಗ್ ವೇಗ ಪಡೆದಿದೆ. ಜನರು ಸಣ್ಣ ಪುಟ್ಟ ಕೆಲಸಗಳನ್ನೂ ಆನ್ಲೈನ್ ನಲ್ಲಿಯೇ ಮಾಡಿ ಮುಗಿಸುತ್ತಿದ್ದಾರೆ. ರೈಲ್ವೆ ಟಿಕೆಟ್ ಬುಕ್ಕಿಂಗ್ ಕೂಡ ಆನ್ಲೈನ್ ನಲ್ಲಿ ನಡೆಯುತ್ತಿದೆ. ಆದ್ರೆ ಈ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವೇಳೆ ಕೆಲವೊಂದು ಎಚ್ಚರಿಕೆ ವಹಿಸುವ ಅಗತ್ಯವಿದೆ. ಇಲ್ಲವಾದ್ರೆ ನಿಮ್ಮ ಖಾಸಗಿ ಮಾಹಿತಿ ಲೀಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ರೈಲ್ವೆ ಟಿಕೆಟ್ ಬುಕ್ಕಿಂಗ್ ಗೆ ಐ ಆರ್ ಸಿ ಟಿ ಸಿ ಅಧಿಕೃತ ವೆಬ್ಸೈಟ್ ಇದೆ. ಈ ವೆಬ್ ಸೈಟ್ ಮೂಲಕವೇ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡಿ. ಬೇರೆ ವೆಬ್ ಸೈಟ್ ಗಳಲ್ಲಿ ಅಪ್ಪಿತಪ್ಪಿಯೂ ಟಿಕೆಟ್ ಬುಕ್ಕಿಂಗ್ ಮಾಡಬೇಡಿ. ಬೇರೆ ಸೈಟ್ ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಲೀಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಹ್ಯಾಕರ್ಸ್ ಪ್ರಸಿದ್ಧ ವೆಬ್ ಸೈಟ್ ಹೆಸರನ್ನು ಬಳಸಿಯೇ ಮೋಸ ಮಾಡ್ತಾರೆ. ಐ ಆರ್ ಸಿ ಟಿ ಸಿ ಹೆಸರಿನಲ್ಲಿಯೇ ವೆಬ್ ಸೈಟ್ ಶುರುಮಾಡಿ ಮಾಹಿತಿ ಕಳ್ಳತನ ಮಾಡ್ತಾರೆ. ಕೆಲವೊಂದು ಅಕ್ಷರಗಳಲ್ಲಿ ಸಣ್ಣ ವ್ಯತ್ಯಾಸಗಳಿರುತ್ತವೆ. ಹಾಗಾಗಿ ನೀವು ಟಿಕೆಟ್ ಬುಕ್ ಮಾಡ್ತಿರುವ ವೆಬ್ ಸೈಟ್ ಅಧಿಕೃತ ವೆಬ್ ಸೈಟಾ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಟಿಕೆಟ್ ಬುಕ್ಕಿಂಗ್ ಇರಲಿ ಇಲ್ಲ ಯಾವುದೇ ಹಣ ವರ್ಗಾವಣೆಯಿರಲಿ ಸಾರ್ವಜನಿಕ ಕಂಪ್ಯೂಟರ್ ಅಥವಾ ಸೈಬರ್ ಕಂಪ್ಯೂಟರ್ ಬಳಸುವ ವೇಳೆ ಎಚ್ಚರ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಕ್ರೋಮ್ ಹಾಗೂ ಮೊಜಿಲ್ಲಾದಲ್ಲಿ ಪಾಸ್ ವರ್ಡ್ ಸೇವ್ ಮಾಡಬೇಕಾ ಎಂದು ಕೇಳುತ್ತದೆ. ಸಾರ್ವಜನಿಕ ಕಂಪ್ಯೂಟರ್ ಬಳಸುವ ವೇಳೆ ಅಪ್ಪಿತಪ್ಪಿಯೂ ಪಾಸ್ ವರ್ಡ್ ಸೇವ್ ಮೇಲೆ ಕ್ಲಿಕ್ ಮಾಡಬೇಡಿ. ಇದ್ರಿಂದ ನಿಮ್ಮ ಖಾಸಗಿ ಮಾಹಿತಿ ಲೀಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಟಿಕೆಟ್ ಬುಕ್ಕಿಂಗ್ ಸೇರಿದಂತೆ ಯಾವುದೇ ವಹಿವಾಟನ್ನು ಸುರಕ್ಷಿತವಾಗಿಟ್ಟುಕೊಳ್ಳುವವರು ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಗೆ ಎಂಟಿ ವೈರಸ್ ಅವಶ್ಯವಾಗಿ ಅಳವಡಿಸಿ. ನಿಮ್ಮ ಪ್ರತಿಯೊಂದು ಮಾಹಿತಿ ಇದ್ರಿಂದ ಸುರಕ್ಷಿತವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...