alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದುಬಾರಿಯಾಗಲಿದೆ ಈರುಳ್ಳಿ

ದೇಶದೆಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದರೆ, ಇತ್ತ ಬರ ಹಾಗೂ ಸಾಲು ಸಾಲು ರಜೆಯಿಂದ ಈರುಳ್ಳಿ ‌ದರ ಏರಿಕೆಯಾಗುವುದು ನಿಶ್ಚಿತವಾಗುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಈಗಾಗಲೇ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆ ದೀಪಾವಳಿ ವೇಳೆಗೆ ಪ್ರತಿ ಕೆಜಿಗೆ 40-45 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಹಾರಾಷ್ಟ್ರ ಹೋಲ್ ಸೇಲ್ ವರ್ತಕರು ಅಂದಾಜಿಸಿದ್ದಾರೆ.

ಇದಕ್ಕೆ ಪ್ರಮುಖವಾಗಿ ಅತಿಹೆಚ್ಚು ಈರುಳ್ಳಿ ಬೆಳೆಯುವ‌ ಮಹಾರಾಷ್ಟ್ರ ಭಾಗದಲ್ಲಿ ಈ ಬಾರಿ ಮಳೆ ಕೊರತೆ ಎದುರಾಗಿದ್ದು, ಇದರಿಂದ ಬೆಳೆ ಪ್ರಮಾಣ ಇಳಿಕೆಯಾಗಿದೆ. ನವರಾತ್ರಿ ವೇಳೆಗೆ ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಮಳೆ ಬಂದಿದ್ದರೆ, ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಮಳೆ ಕೈಕೊಟ್ಟಿರುವುದರಿಂದ ಗೆಡ್ಡೆಯ ಗಾತ್ರ ಸಣ್ಣದಾಗಿದೆ‌ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ ದೀಪಾವಳಿ ವೇಳೆ, ಮಹಾರಾಷ್ಟ್ರದ ಬಹುತೇಕ ಹೋಲ್ ಸೇಲ್ ವ್ಯಾಪಾರಿಗಳು ಸುಮಾರು 6-8 ದಿನ ರಜೆ ಘೋಷಿಸಿ, ಯಾವುದೇ ವಹಿವಾಟು ನಡೆಸುವುದಿಲ್ಲ. ಆದ್ದರಿಂದ ಈಗಾಗಲೇ ಅಲ್ಪ ಪ್ರಮಾಣದ ಏರಿಕೆ ಕಂಡಿರುವ ಈರುಳ್ಳಿ ಮತ್ತಷ್ಟು ಏರಿಕೆಯಾಗಲಿದೆ.

ಈಗಾಗಲೇ ಶೇ.40 ರಷ್ಟು ದರ ಏರಿಕೆ ಕಂಡಿದ್ದು, ದೀಪಾವಳಿ ವೇಳೆ ಪ್ರತಿ ಕೆಜಿಗೆ 40-50 ರೂಪಾಯಿ ಏರಿಕೆಯಾಗುವ ಮೂಲಕ ಮತ್ತಷ್ಟು ಶಾಕ್ ನೀಡುವುದರಲ್ಲಿ ಅನುಮಾನವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...