alex Certify
ಕನ್ನಡ ದುನಿಯಾ       Mobile App
       

Kannada Duniya

ಒನ್ ಪ್ಲಸ್ 6 ಸ್ಮಾರ್ಟ್ಫೋನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ

ಒನ್ ಪ್ಲಸ್ 6 ಹೊಸ ರೂಪಾಂತರದ ನಿರೀಕ್ಷೆಯಲ್ಲಿರುವವರಿಗೊಂದು ಖುಷಿ ಸುದ್ದಿ. ಹೊಸ ವರ್ಷನ್ ಫೋನ್ ಜುಲೈ 2ರಂದು ಬಿಡುಗಡೆಯಾಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿಯೇ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಈಗ ಹೊಸ ಆವೃತ್ತಿ ಹಾಗೂ ಬಣ್ಣದಲ್ಲಿ ಮೊಬೈಲ್ ಬಿಡುಗಡೆಯಾಗಲಿದೆ.

ಒನ್ ಪ್ಲಸ್ ಈ ಬಗ್ಗೆ ಟ್ವೀಟರ್ ಮೂಲಕ ಮಾಹಿತಿ ನೀಡಿದೆ. ಒನ್ ಪ್ಲಸ್ 6 ರೆಡ್ ವೆರಿಯಂಟ್ ಬಿಡುಗಡೆ ಮಾಡುವುದಾಗಿ ಕಂಪನಿ ಸುಳಿವು ನೀಡಿದೆ. ಈ ಸಂಬಂಧ ಟೀಸರ್ ವಿಡಿಯೋ ಒಂದನ್ನು ಕಂಪನಿ ಬಿಡುಗಡೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲೂ ಈ ಮೊಬೈಲ್ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒನ್ ಪ್ಲಸ್ ತನ್ನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಟೀಸರ್ ಬಿಡುಗಡೆ ಮಾಡಿದ್ದು, Now initiating: C61422. Do you wish to continue? ಎಂದು ಟ್ವಿಟ್ ಮಾಡಿದೆ. ಕೆಂಪು ಬಣ್ಣದ ಮೊಬೈಲ್ ಫೋನ್ ಗೆ ಆರ್ ಜಿ ಬಿ ಕೋಡ್ C61422 ಜಾರಿ ಮಾಡಿದೆ. ಟೀಸರ್ ನಲ್ಲಿ ಜುಲೈ 2ರ ದಿನಾಂಕದ ಉಲ್ಲೇಖವಿದೆ. ಕೆಂಪು ಬಣ್ಣದ ಒನ್ ಪ್ಲಸ್ 6, 8 ಜಿಬಿ ರ್ಯಾಮ್ ಹಾಗೂ 256 ಸ್ಟೋರೇಜ್ ಹೊಂದಿರುವ ಸಾಧ್ಯತೆ ಹೆಚ್ಚಿದೆ. ಮೊಬೈಲ್ 43,999 ರೂಪಾಯಿಗೆ ಸಿಗಲಿದೆ ಎಂದು ಅಂದಾಜಿಸಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...