alex Certify
ಕನ್ನಡ ದುನಿಯಾ       Mobile App
       

Kannada Duniya

ಒನ್ ಪ್ಲಸ್ 6 ಮೊಬೈಲ್ ಮೇಲೆ ಸಿಗ್ತಿದೆ 2,000 ರೂ. ರಿಯಾಯಿತಿ

ಒನ್ ಪ್ಲಸ್ 6 ಖರೀದಿ ಮಾಡುವ ಗ್ರಾಹಕರಿಗೊಂದು ಖುಷಿ ಸುದ್ದಿ. ಅಮೆಜಾನ್ ಇಂಡಿಯಾ ಒನ್ ಪ್ಲಸ್ 6 ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಗ್ರಾಹಕರಿಗೆ ಫೋನ್ ಮೇಲೆ 2000 ರೂಪಾಯಿ ಕ್ಯಾಶ್ಬ್ಯಾಕ್ ಸಿಗ್ತಿದೆ. ಗ್ರಾಹಕರು ಈ ಆಫರನ್ನು ಜುಲೈ 4 ರಿಂದ ಜುಲೈ 15 ರವರೆಗೆ ಖರೀದಿ ಮಾಡಬಹುದಾಗಿದೆ.

ಈ ಆಫರ್ ಹೆಚ್ ಡಿಎಫ್ ಸಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗ್ರಾಹಕರಿಗೆ ಮಾತ್ರ ಸಿಗಲಿದೆ. ಗ್ರಾಹಕರು ಕಾರ್ಡ್ ನಲ್ಲಿ ಒಂದು ವಹಿವಾಟು ಮಾತ್ರ ಮಾಡಬಹುದಾಗಿದೆ. ಹಿಂದೆ ಆಸುಸ್ ಜೆನಾಫೋನ್ 5 ಝೆಡ್ ಗೆ ಅಮೆಜಾನ್ ಈ ಆಫರ್ ನೀಡಿತ್ತು. 64 ಜಿಬಿ ಹಾಗೂ 128 ಜಿಬಿ ಸ್ಟೋರೇಜ್ ನ ಸ್ಮಾರ್ಟ್ಫೋನ್ ಗಳಿಗೆ ಲಭ್ಯವಿದೆ.

ಒನ್ ಪ್ಲಸ್ 6 ಬೆಲೆ 34,999 ರೂಪಾಯಿ. ರೆಡ್ ಕಲರ್ ಸೆಟ್ ಗೆ ಈ ಆಫರ್ ಸಿಗ್ತಿಲ್ಲ.ಇದ್ರ ಜೊತೆಗೆ 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಸ್ಟೋರೇಜ್ ಮೊಬೈಲ್ ಗೂ ಈ ಆಫರ್ ನೀಡಿಲ್ಲ. ಬಳಕೆದಾರರಿಗೆ ಆಫರ್ ಜೊತೆ 12 ತಿಂಗಳ ಕಾಲ ಹಾನಿ ವಿಮೆ ಕೂಡ ಸಿಗ್ತಿದೆ. ಅಮೆಜಾನ್ ಪ್ರೈಂನಿಂದ 250 ರೂ. ವಿಡಿಯೋ ಕಾರ್ಡ್ ಕೂಡ ಸಿಗಲಿದೆ. ಅಮೆಜಾನ್ ಕಿಂಡಲ್ ನಿಂದ ಪುಸ್ತಕ ಖರೀದಿ ಮಾಡುವ ಗ್ರಾಹಕರಿಗೆ 500 ರೂಪಾಯಿ ರಿಯಾಯಿತಿ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...