alex Certify
ಕನ್ನಡ ದುನಿಯಾ       Mobile App
       

Kannada Duniya

ಆಪಲ್, ಸ್ಯಾಮ್ಸಂಗ್ ಹಿಂದಿಕ್ಕಿ ಭಾರತ ಮಾರುಕಟ್ಟೆಯಲ್ಲಿ ರಾಜನಾದ ಒನ್ ಪ್ಲಸ್

ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ ಬಗ್ಗೆ ಕೌಂಟರ್ಪಾಯಿಂಟ್ ರಿಸರ್ಚ್ ಇತ್ತೀಚಿಗೆ ಸಮೀಕ್ಷೆಯೊಂದನ್ನು ನಡೆಸಿದೆ. ಅದ್ರ ವರದಿ ಪ್ರಕಾರ, 2018 ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಪ್ರೀಮಿಯಮ್ ಸ್ಮಾರ್ಟ್ಫೋನ್ (30 ಸಾವಿರಕ್ಕಿಂತ ಹೆಚ್ಚು ಬೆಲೆ) ಮಾರಾಟ ಶೇಕಡಾ 19 ರಷ್ಟು ಹಾಗೂ ಅನುಕ್ರಮವಾಗಿ ಶೇಕಡಾ 10 ರಷ್ಟು ಏರಿಕೆಯಾಗಿದೆ.

ಪ್ರೀಮಿಯಮ್ ಕ್ಲಾಸ್ ಮೊಬೈಲ್ ಬೆಲೆ ಹೆಚ್ಚಾಗಿದ್ದು, ಹೊಸ ಮೊಬೈಲ್ ಗಳ ಮೇಲೆ ಹೆಚ್ಚೆಚ್ಚು ಆಫರ್ ನೀಡಲಾಗ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಆಫರ್ ಕೂಡ ಹೆಚ್ಚಿದೆ. ಕ್ಯಾಶ್ಬ್ಯಾಕ್, ಇಎಂಐ, ಡೇಟಾ ಬಂಡ್ಲಿಂಗ್ ಸೇರಿದಂತೆ ಆಕರ್ಷಣೀಯ ಕೊಡುಗೆಗಳು ಸೇರಿವೆ.

ಎಲ್ಲ ಪ್ರಮುಖ ಬ್ರ್ಯಾಂಡ್ ಮೊಬೈಲ್ ಗಳನ್ನು ಎರಡನೇ ತ್ರೈಮಾಸಿಕದಲ್ಲಿ ಒನ್ ಪ್ಲಸ್ ಹಿಂದಿಕ್ಕಿದೆ. ಈ ಕ್ವಾಟರ್ಸ್ ನಲ್ಲಿ ಒನ್ ಪ್ಲಸ್ ಪ್ರೀಮಿಯಂ ಮೊಬೈಲ್ ಮೊದಲ ಸ್ಥಾನದಲ್ಲಿದೆ. ಈ ತ್ರೈಮಾಸಿಕದಲ್ಲಿ ಒನ್ ಪ್ಲಸ್ 6 ಬಿಡುಗಡೆ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ ರೇಸ್ ನಲ್ಲಿ ಒನ್ ಪ್ಲಸ್ ಮುಂದಿದೆ. ಒನ್ ಪ್ಲಸ್ ಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ.

ಎಸ್ 9 ಪ್ಲಸ್ ಹಾಗೂ ಒನ್ ಪ್ಲಸ್ 5ಟಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದೆ. ಭಾರತ ಮಾರುಕಟ್ಟೆಯ ಶೇಕಡಾ 40 ರಷ್ಟನ್ನು ಒನ್ ಪ್ಲಸ್ ಆಕ್ರಮಿಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...