alex Certify
ಕನ್ನಡ ದುನಿಯಾ       Mobile App
       

Kannada Duniya

GST ಜಾರಿಯಾಗಿ ವರ್ಷ: ಗ್ರಾಹಕರಿಗಾಗಿರುವ ಲಾಭವೇನು?

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ ಅರ್ಥಾತ್ ಜಿಎಸ್ಟಿ ಜಾರಿಯಾಗಿ ಜುಲೈ 1 ಕ್ಕೆ ವರ್ಷ ತುಂಬಲಿದೆ. ಭಾರತ ಏಕರೂಪ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡಿರೋದಕ್ಕೂವರ್ಷ ಭರ್ತಿಯಾಗಲಿದೆ.

ವರ್ಷದ ಅವಧಿಯಲ್ಲಿ ಭಾರತದಲ್ಲಿ ಅನೇಕ ವಸ್ತುಗಳು ಮತ್ತು ಸೇವೆ ಭಾರತೀಯರಿಗೆ ಏಕರೂಪ ತೆರಿಗೆಯಲ್ಲಿ ಸಿಕ್ಕಿದೆ. ಆದ್ರೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅನೇಕ ವಸ್ತುಗಳು ಇನ್ನೂ ಜಿಎಸ್ಟಿಯ ಅಧೀನಕ್ಕೆ ಒಳಪಟ್ಟಿಲ್ಲ.

ಅನೇಕ ವರ್ಷಗಳಿಂದ ಭಾರತದಲ್ಲಿ ಜಾರಿಯಲ್ಲಿದ್ದ ಪರೋಕ್ಷ ತೆರಿಗೆ ಪದ್ಧತಿ ಸ್ಥಾನವನ್ನ ಇಂದು ಜಿಎಸ್ಟಿ ಆವರಿಸಿದೆ. ಝೀರೋ ಪರ್ಸೆಂಟ್, 5 ಪರ್ಸೆಂಟ್, 12 ಪರ್ಸೆಂಟ್, 18 ಪರ್ಸೆಂಟ್, 28 ಪರ್ಸೆಟ್ ಅನ್ನೋ ಐದು ವಿಭಾಗಗಳಲ್ಲಿ ಜಿಎಸ್ಟಿ ಜಾರಿಗೆ ಬಂದಿರೋದು ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನ ನೀಡಿದೆ. ಭಾರತದ ನಾನಾ ನಗರಗಳಲ್ಲಿ ಬೇರೆಬೇರೆಯಾಗಿದ್ದ ಅನೇಕ ವಸ್ತುಗಳ ದರ ಏಕರೂಪದರವಾಗಿ ಮಾರ್ಪಾಡಾಗಿದೆ.

ವ್ಯಾಪಾರ ಸ್ನೇಹಿಗಿಂತ ಹೆಚ್ಚಾಗಿ ಗ್ರಾಹಕ ಸ್ನೇಹಿಯಾಗಿರುವ ಜಿಎಸ್ಟಿ, ವಸ್ತುಗಳ ಅಗತ್ಯ ಮತ್ತು ಪೂರೈಕೆಯ ನಡುವೆ ಸಮಾನ ಅಂತರವನ್ನ ಕಾಯ್ದುಕೊಂಡಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ಹೆಚ್ಚಿನ ಅನುಕೂಲವನ್ನು ಉಂಟು ಮಾಡಿದೆ ಅಂತ ಹೇಳಲಾಗ್ತಿದೆ. ಏಕರೂಪ ತೆರಿಗೆ ವ್ಯವಸ್ಥೆಯಿಂದಾಗಿ ಸಾಲ ಸೌಲಭ್ಯವೂ ಸುಲಭವಾಗಿದ್ದು, ಸಣ್ಣ ಪ್ರಮಾಣದ ಉದ್ದಿಮೆದಾರರಿಗೆ ಹೆಚ್ಚಿನ ಅನುಕೂಲವನ್ನುಂಟು ಮಾಡಿದೆ.

ಜಿಎಸ್ಟಿಯ ಪ್ರಯೋಜನವನ್ನು ತೈಲದರಗಳಲ್ಲೂ ಜಾರಿಗೆ ತರಬೇಕು. ಆ ಮೂಲಕ ದಿನೇ ದಿನೇ ಜನಸಾಮಾನ್ಯರ ಜೇಬಿಗೆ ಆಗ್ತಿರೋ ಹೊರೆಯನ್ನ ಇಳಿಸಬೇಕು ಅನ್ನೋದೇ ಭಾರತೀಯರ ಬೇಡಿಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...