alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ OnePlus 5T ಬೆಲೆ ಎಷ್ಟು ಗೊತ್ತಾ?

ಚೀನಾ ಸ್ಮಾರ್ಟ್ಫೋನ್ ತಯಾರಿಕ ಕಂಪನಿಯ OnePlus,  OnePlus 5T ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ನ್ಯೂಯಾರ್ಕ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಕಂಪನಿ OnePlus 5T ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ OnePlus 5 ಅಪ್ಗ್ರೇಡ್ ವರ್ಜನ್ ಆಗಿದೆ. ಇದ್ರಲ್ಲಿ ಫೇಸ್ ಅಲ್ಲಾಕ್, ಡ್ಯಾಶ್ ಚಾರ್ಜ್ ಹಾಗೂ ಡ್ಯುಯಲ್ ಕ್ಯಾಮರಾ ಸೌಲಭ್ಯವಿದೆ.

ಭಾರತದಲ್ಲಿ OnePlus 5T ಎರಡು ರೂಪಾಂತರದಲ್ಲಿ ಲಭ್ಯವಾಗಲಿದೆ. 6 ಜಿಬಿ ರ್ಯಾಮ್ ಜೊತೆ 64ಜಿಬಿ ಇಂಟರ್ನಲ್ ಸ್ಟೋರೇಜ್ ಇರುವ ಮೊಬೈಲ್ ಬೆಲೆ 32,999 ರೂಪಾಯಿ. 8 ಜಿಬಿ ರ್ಯಾಮ್ ಹಾಗೂ 128ಜಿಬಿ ಇಂಟರ್ನಲ್ ಸ್ಟೋರೇಜ್ ಇರುವ ಮೊಬೈಲ್ ಬೆಲೆ 37,999 ರೂಪಾಯಿಗೆ ಸಿಗಲಿದೆ.

ಇ-ಕಾಮರ್ಸ್ ವೆಬ್ ಸೈಟ್ ಅಮೆಜಾನ್ ಇಂಡಿಯಾ ಹಾಗೂ ಒನ್ ಪ್ಲಸ್ ವೆಬ್ಸೈಟ್ ನಲ್ಲಿ ಮಾತ್ರ ಈ ಮೊಬೈಲ್ ಭಾರತೀಯ ಗ್ರಾಹಕರಿಗೆ ಸಿಗಲಿದೆ. ನವೆಂಬರ್ 21ರ ಸಂಜೆ 4.30ರ ನಂತ್ರ ಅಮೆಜಾನ್ ವೆಬ್ಸೈಟ್ ನಲ್ಲಿ ಈ ಮೊಬೈಲ್ ಸಿಗಲಿದೆ. ನವೆಂಬರ್ 28ರಂದು ಅಮೆಜಾನ್ ಸೇಲ್ ನಡೆಯಲಿದ್ದು, ಭಾರತವೊಂದೇ ಅಲ್ಲ ನ್ಯೂಯಾರ್ಕ್ ಹಾಗೂ ಯುರೋಪಿನ ಗ್ರಾಹಕರು ಇದ್ರಲ್ಲಿ ಪಾಲ್ಗೊಳ್ಳಲಿದ್ದಾರೆ. ಆರಂಭದಲ್ಲಿ ಅಮೆಜಾನ್ ಹಾಗೂ ಕಂಪನಿ ಕೆಲವೊಂದು ಆಫರ್ ನೀಡುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...