alex Certify
ಕನ್ನಡ ದುನಿಯಾ       Mobile App
       

Kannada Duniya

ನಗೆಪಾಟಲಿಗೀಡಾಗಿದೆ ಪೆಟ್ರೋಲ್-ಡೀಸೆಲ್ ದರ ಇಳಿಕೆ…!

ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಕಳೆದ 15 ದಿನಗಳಿಂದಲೂ ಸತತ ಏರಿಕೆ ಕಾಣುತ್ತಲೇ ಇದ್ದ ಪೆಟ್ರೋಲ್- ಡೀಸೆಲ್ ದರ ಹದಿನಾರನೇ ದಿನದಂದು ಇಳಿಕೆ ಕಂಡಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ವಾಹನ ಮಾಲೀಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಬಹುದೆಂಬ ಆಶಾ ಭಾವನೆ ಹೊಂದಿದ್ದರು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವೆಬ್ಸೈಟ್ನಲ್ಲಿ ಮೊದಲು ಪೆಟ್ರೋಲ್- ಡೀಸೆಲ್ ದರದಲ್ಲಿ 60 ಪೈಸೆಯಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ಇತ್ತು. ಕಳೆದ ಹದಿನೈದು ದಿನಗಳಿಂದಲೂ ಪ್ರತಿನಿತ್ಯ ಪೆಟ್ರೋಲ್-ಡೀಸೆಲ್ ದರ ಏರಿಕೆಯ ಸುದ್ದಿಯನ್ನೇ ನೋಡುತ್ತಿದ್ದ ವಾಹನ ಮಾಲೀಕರು ಕೊಂಚ ಸಮಾಧಾನ ಪಟ್ಟುಕೊಂಡಿದ್ದರು.

ಆದರೆ ವಾಹನ ಮಾಲೀಕರ ಈ ಸಮಾಧಾನ ಕೇವಲ ಒಂದು ಗಂಟೆಯಲ್ಲೇ ಕರಗಿಹೋಯಿತು. ಇದಕ್ಕೆ ಕಾರಣ ಪೆಟ್ರೋಲ್- ಡೀಸೆಲ್ ದರ ಇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಇಳಿಕೆಯಾಗಿರುವುದು 60ಪೈಸೆಯಲ್ಲಾ ಬದಲಾಗಿ ಒಂದು ಪೈಸೆ. ತಾಂತ್ರಿಕ ದೋಷದ ಕಾರಣಕ್ಕಾಗಿ ತಪ್ಪಾಗಿದೆ ಎಂದು ಹೇಳಿ ಕೈತೊಳೆದುಕೊಂಡಿತು.

ಈ ಪ್ರಕಟಣೆ ಹೊರ ಬಿದ್ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಒಂದು ಪೈಸೆ ಇಳಿಕೆ ಕುರಿತಂತೆ ನೆಟ್ಟಿಗರು ವ್ಯಂಗ್ಯವಾಗಿ ಪ್ರತಿಕ್ರಿಯೆಗಳನ್ನು ಹಾಕುತ್ತಿದ್ದಾರೆ.

ಮಹಿಳೆಯೊಬ್ಬರು ತಾವು ಇಂದು ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ದು, ಇದರಿಂದ 29 ಪೈಸೆ ಉಳಿತಾಯವಾಗಿದೆ. ಇಷ್ಟೊಂದು ಹಣವನ್ನು ಏನು ಮಾಡಲಿ ಎಂದು ಪ್ರಶ್ನಿಸಿದರೆ, ಮತ್ತೊಬ್ಬರು ಪೆಟ್ರೋಲ್ ದರ ಇಳಿಕೆಯಿಂದ ತಮಗಾಗುವ ಲಾಭವನ್ನ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಒಂದು ಪೈಸೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಇನ್ನೊಬ್ಬರು, ತೈಲ ಕಂಪನಿಯ ಈ ಕ್ರಮ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...