alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಗಂಟೆಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಸೇಲಾಯ್ತು ಇಷ್ಟೊಂದು ಮೊಬೈಲ್…!

ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಮಧ್ಯೆ ಋತುವಿನ ಸೇಲ್ ಯುದ್ಧ ನಡೆಯುತ್ತಿದೆ. ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಕಂಪನಿಗಳು ಆಫರ್ ಸೇಲ್ ನಡೆಸುತ್ತಿವೆ. ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಬುಧವಾರ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ಶುರು ಮಾಡಿದೆ. ಸೇಲ್ ಶುರುವಾದ ಮೊದಲ ಒಂದು ಗಂಟೆಯಲ್ಲೇ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಬಿಗ್ ಬಿಲಿಯನ್ ಸೇಲ್ ಶುರುವಾದ ಮೊದಲ ಒಂದು ಗಂಟೆಯಲ್ಲಿ 1000 ಕೋಟಿ ಮೌಲ್ಯದ ಸುಮಾರು 10 ಲಕ್ಷ ಮೊಬೈಲ್ ಮಾರಾಟವಾಗಿದೆಯಂತೆ. ಇದು ದೇಶದಲ್ಲಿ ಹೊಸ ದಾಖಲೆ ಎಂದು ಕಂಪನಿ ಹೇಳಿದೆ. ಬೆಂಗಳೂರಿನ ಈ ಕಂಪನಿ ಕೆಲ ದಿನಗಳ ಹಿಂದೆ ವಾಲ್ಮಾರ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿ ಪ್ರಕಾರ ಸೇಲ್ ನ ಎರಡನೇ ದಿನ 30 ಲಕ್ಷ ಸ್ಮಾರ್ಟ್ಫೋನ್ ಮಾರಾಟ ಮಾಡಿದೆಯಂತೆ.

ಹಿಂದಿನ ವರ್ಷದ ನಾಲ್ಕು ದಿನಗಳ ಸೇಲ್ ನಲ್ಲಿ ಒಟ್ಟೂ 4,300 ಕೋಟಿ ರೂಪಾಯಿ ವಸ್ತುಗಳು ಮಾರಾಟವಾಗಿದ್ದವು. ಆದ್ರೆ ಈ ವರ್ಷ ಸೇಲ್ ಶುರುವಾದ ಎರಡನೇ ದಿನವೇ ಹಿಂದಿನ ವರ್ಷದ ದಾಖಲೆಯನ್ನು ಫ್ಲಿಪ್ಕಾರ್ಟ್ ಮುರಿದಿದೆ. ಫ್ಲಿಪ್ಕಾರ್ಟ್ ಜೊತೆ ಅಮೆಜಾನ್ ಕೂಡ ನಿರೀಕ್ಷೆ ಮೀರಿ ಪ್ರತಿಕ್ರಿಯೆ ಸಿಗ್ತಿದೆ ಎಂದಿದೆ. ಇನ್ನು ಪೇಟಿಎಂ ಮಾಲ್ ನಲ್ಲಿ ಕೂಡ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...