alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಗಿ ಪ್ರಿಯರಿಗೆ ಸಿಗ್ತಿದೆ ಈ ಬಂಪರ್ ಆಫರ್…!

ಪ್ಲಾಸ್ಟಿಕ್ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಆಹಾರ ಕಂಪನಿ ನೆಸ್ಲೆ ಇಂಡಿಯಾ ಖಾಲಿ ಪ್ಯಾಕೆಟ್ ಮರಳಿಸುವ ಹೊಸ ಕಾರ್ಯಕ್ರಮವೊಂದನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.

ಗ್ರಾಹಕರು 10 ಖಾಲಿ ಮ್ಯಾಗಿ ಪ್ಯಾಕೆಟ್‌ಗಳನ್ನು ವಾಪಸ್ ನೀಡಿದರೆ 1 ಮ್ಯಾಗಿ ಪ್ಯಾಕೆಟ್ ಉಚಿತವಾಗಿ ನೀಡಲಾಗುತ್ತದೆ ಎಂಬ ಆಫರ್ ಅನ್ನು ನೆಸ್ಲೆ ಪ್ರಕಟಿಸಿದೆ. ಈ ಆಫರ್ ದೇಶಾದ್ಯಂತ ಲಭ್ಯವಿಲ್ಲ. ಉತ್ತರಾಖಂಡ್‌ನ 2 ಸ್ಥಳಗಳಲ್ಲಿ ಅಂದರೆ, ಡೆಹ್ರಾಡೂನ್ ಹಾಗೂ ಮಸ್ಸೂರಿಗಳ 250 ರಿಟೈಲ್ ಮಳಿಗೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

ಮ್ಯಾಗಿ, ಪೆಪ್ಸಿಯ ಲೇಸ್ ಚಿಪ್ಸ್ ಹಾಗೂ ಪಾರ್ಲೆಯ ಫ್ರೂಟಿ ಉತ್ತರಾಖಂಡ್‌ನ ಪ್ರಸಿದ್ಧ ಗಿರಿಧಾಮಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಟಾಪ್ ಬ್ರಾಂಡ್‌ಗಳಾಗಿವೆ. ಈ ಸ್ಥಳಗಳಲ್ಲಿ ದಕ್ಷ ರೀತಿಯಲ್ಲಿ ಖಾಲಿ ಪ್ಯಾಕೆಟ್‌ ಗಳ ವಿಲೇವಾರಿ ನಡೆಯುತ್ತಿಲ್ಲ. ಈ ಸಂಗತಿ ಸ್ವತಃ ಉತ್ತರಾಖಂಡ್‌ ನ ಮಾಲಿನ್ಯ ನಿಯಂತ್ರಣಾ ಮಂಡಳಿ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿತ್ತು.

ನಮ್ಮ ಈ ಹೆಜ್ಜೆಯು ಗ್ರಾಹಕರ ವರ್ತನೆಯನ್ನು ಬದಲಾಯಿಸಲಿದೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿಯ ಜವಾಬ್ದಾರಿಯ ಕುರಿತು ಅರಿವು ಮೂಡಿಸಲಿದೆ ಎಂಬ ವಿಶ್ವಾಸ ನಮ್ಮದಾಗಿದೆ ಎಂದು ನೆಸ್ಲೆ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...