alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ 100 ಶ್ರೀಮಂತರಲ್ಲೊಬ್ಬ, ಈಗ ಸಂಪೂರ್ಣ ದಿವಾಳಿ

ಸೌದಿ ಅರೇಬಿಯಾದ ಮಾನ್ ಅಲ್ ಸನೀ ಬಹುದೊಡ್ಡ ಉದ್ಯಮಿ, ಕೋಟ್ಯಾಧಿಪತಿಯಾಗಿದ್ದ. ಆದ್ರೀಗ ಸಂಪೂರ್ಣ ದಿವಾಳಿಯಾಗಿದ್ದಾನೆ. 4.8 ಬಿಲಿಯನ್ ಡಾಲರ್ ಸಾಲ ಆತನ ಮೇಲಿದೆ. ಅದನ್ನು ತೀರಿಸಲು ಸಾಧ್ಯವಾಗದೇ ಮಾನ್ ಅಲ್ ಒದ್ದಾಡುತ್ತಿದ್ದಾನೆ.

ಇತ್ತ ಆತನಿಗೆ ಸೇರಿದ ವಾಹನಗಳನ್ನೆಲ್ಲ ಅಧಿಕಾರಿಗಳು ಹರಾಜು ಹಾಕಿದ್ದಾರೆ. ಮಾನ್ ಅಲ್ ಸನೀ, ಸಾದ್ ಗ್ರೂಪ್ ಎಂಬ ಕಂಪನಿಯ ಮಾಲೀಕ. 2007ರಲ್ಲಿ ಫೋರ್ಬ್ಸ್ ಪ್ರಕಟಿಸಿದ್ದ ವಿಶ್ವದ 100 ಶ್ರೀಮಂತರ ಪೈಕಿ ಈತನೂ ಒಬ್ಬನಾಗಿದ್ದ.

ಆದ್ರೆ 2009ರಲ್ಲಿ ಸೌದಿ ಅರೇಬಿಯಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಡಜನ್ ಗಟ್ಟಲೆ ಉದ್ಯಮಿಗಳು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ರು. ಮಾನ್ ಅಲ್ ಸನೀ ಕೂಡ ಆ ಸಮಯದಲ್ಲಿ ಸಾಲದ ಮೇಲೆ ಸಾಲ ಮಾಡಿದ್ದ. ಅದನ್ನು ತೀರಿಸುವ ಗೊಡವೆಗೇ ಹೋಗಿರಲಿಲ್ಲ.

ಇದೀಗ ಕೋರ್ಟ್ ಆದೇಶದ ಮೇರೆಗೆ ಸಾದ್ ಗ್ರೂಪ್ ಗೆ ಸೇರಿದ ಬಸ್, ಲಾರಿ, ಡಿಗ್ಗರ್, ಗಾಲ್ಫ್ ಕಾರ್ಟ್ ಸೇರಿದಂತೆ 900 ವಾಹನಗಳನ್ನು ಹರಾಜು ಹಾಕಲಾಗಿದೆ. ಉದ್ಯಮಿಗೆ ಸೇರಿದ ಆಸ್ತಿ, ಮನೆಯ ಪೀಠೋಪಕರಣಗಳು, ಸೆರಾಮಿಕ್ಸ್, ಯಂತ್ರಗಳು ಎಲ್ಲವನ್ನೂ ಹರಾಜು ಹಾಕಲಾಗುತ್ತದೆ. ಈ ವಸ್ತುಗಳನ್ನು ಕೊಳ್ಳಲು ಜನರು ಮುಗಿಬಿದ್ದಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...