alex Certify
ಕನ್ನಡ ದುನಿಯಾ       Mobile App
       

Kannada Duniya

ಕುಸಿತವಾಯ್ತಾ ರಾಮ್ ದೇವ್ ಅವರ ‘ಪತಂಜಲಿ’ ಜನಪ್ರಿಯತೆ…?

ದಿನ ಬಳಕೆ ವಸ್ತುಗಳಿಂದ ಹಿಡಿದು ಸೌಂದರ್ಯವರ್ಧಕ ಇತ್ಯಾದಿ ವಿಭಾಗಗಳಲ್ಲಿ ಹೊಸ ಮಾರುಕಟ್ಟೆ ಸೃಷ್ಟಿಸಿದ್ದ ಬಾಬಾ ರಾಮ್‌ದೇವ್‌ ಅವರ ಪತಂಜಲಿ ಸಂಸ್ಥೆ ತನ್ನ ಗ್ರಾಹಕ ವಲಯದಲ್ಲಿ ಕೊಂಚ ಇಳಿಕೆ ಕಾಣತೊಡಗಿದೆ.

ಕಳೆದ 2 ವರ್ಷದಿಂದ ವಾರ್ಷಿಕ ಶೇ.100 ರಷ್ಟು ಬೆಳವಣಿಗೆ ಹೊಂದಿದ್ದ ಪತಂಜಲಿ ಆಯುರ್ವೇದ ಉತ್ಪನ್ನಗಳ ಬೇಡಿಕೆಯಲ್ಲಿ ಇದೀಗ ಕೊಂಚ ಇಳಿಕೆ ಕಂಡಿರುವುದಾಗಿ ಸಮೀಕ್ಷೆಯೊಂದು ತಿಳಿಸಿದೆ.

ಹಿಂದುಸ್ತಾನ್ ಯುನಿಲಿವರ್‌ ಸೇರಿದಂತೆ ಇನ್ನಿತರ ಸಂಸ್ಥೆಗಳ ಗ್ರಾಹಕರು ಪತಂಜಲಿಯತ್ತ ತಿರುಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಪತಂಜಲಿ ಕೊಂಚ ಹಿಂದೆ ಬಿದ್ದಿದೆ ಎಂದು ತಿಳಿದು ಬಂದಿದೆ. ಏತನ್ಮಧ್ಯೆ ದಂತ ಕಾಂತಿ ಹಾಗೂ ತುಪ್ಪದ ವಿಭಾಗದಲ್ಲಿ ಹೆಚ್ಚಿನ ಗ್ರಾಹಕರನ್ನು ಪತಂಜಲಿ ಕಾಯ್ದುಕೊಂಡಿದೆ.

ಪತಂಜಲಿ ಹಾಗೂ ಇತರೆ ಸಂಸ್ಥೆಯ ಉತ್ಪನ್ನಗಳನ್ನು ವಿಭಾಗೀಕರಿಸಲಾಗುತ್ತಿಲ್ಲ. ಗ್ರಾಹಕರು ಇತರೆ ಉತ್ಪನ್ನಗಳೊಂದಿಗೆ ತುಲನೆ ಮಾಡುತ್ತಿದ್ದು, ವ್ಯತ್ಯಾಸ ಅಥವಾ ಹೊಸತನ್ನು ಪತಂಜಲಿಯಲ್ಲಿ ಕಾಣದಾಗಿದ್ದಾರೆ. ಪ್ರಮುಖವಾಗಿ ಕೂದಲಿನ ಆರೈಕೆಯ ವಿಭಾಗದಲ್ಲಿನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...