alex Certify
ಕನ್ನಡ ದುನಿಯಾ       Mobile App
       

Kannada Duniya

ಲೀಕ್ ಆಯ್ತು ರಿಲಾಯನ್ಸ್ ಜಿಯೋ ಬಂಪರ್ ಆಫರ್

jio gfxಉಚಿತ 4 ಜಿ ಸಿಮ್ ನೀಡುವ ಮೂಲಕ ರಿಲಾಯನ್ಸ್ ಜಿಯೋ ಗ್ರಾಹಕರಲ್ಲಿ ಸಂಚಲನ ಎಬ್ಬಿಸಿದೆ. ರಿಲಾಯನ್ಸ್ ಜಿಯೋ 4ಜಿ ಸಿಮ್ ತೆಗೆದುಕೊಂಡ್ರೆ 90 ದಿನಗಳ ಕಾಲ ನಿಮಗೆ ನಯಾಪೈಸೆ ಖರ್ಚಿಲ್ಲ. ಇನ್ ಕಮಿಂಗ್, ಔಟ್ ಗೋಯಿಂಗ್ ಕರೆಗಳೆಲ್ಲ ಉಚಿತ.

ಅನ್ ಲಿಮಿಟೆಡ್ ಡಾಟಾ ಕೂಡ ಫ್ರೀ. ವಾಯ್ಸ್ ಕಾಲಿಂಗ್, ವಿಡಿಯೋ ಕಾಲಿಂಗ್ , ಎಸ್ ಎಂ ಎಸ್ ಎಲ್ಲವೂ ಫ್ರೀ.ಫ್ರೀ..ಫ್ರೀ… 90 ದಿನಗಳಾದ್ಮೇಲೆ ಏನ್ ಕಥೆ ಅನ್ನೋ ಪ್ರಶ್ನೆ ನಿಮ್ಮೆಲ್ಲರಲ್ಲೂ ಇರಬಹುದು. ಅದಕ್ಕೂ ಈಗ ಉತ್ತರ ಸಿಕ್ಕಿದೆ. ಜಿಯೋ ಸಿಮ್ ಆ್ಯಕ್ಟಿವೇಟ್ ಆಗಿ 90 ದಿನ ಕಳೆದ ಮೇಲಿನ ಟಾರಿಫ್ ಪ್ಲಾನ್ ಕೂಡ ಲೀಕ್ ಆಗಿದೆ. ವೆಬ್ ಸೈಟ್ ಒಂದು ಈ ಟಾರಿಫ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಆದ್ರೆ ಇದು ನೂರಕ್ಕೆ ನೂರರಷ್ಟು ನಿಜ ಅಂತಾ ಹೇಳಲಾಗದು.

ಈ ಪ್ಲಾನ್ ನಿಜವೇ ಆಗಿದ್ದಲ್ಲಿ ಇತರ ಟೆಲಿಕಾಂ ಕಂಪನಿಗಳಿಗೆ ರಿಲಾಯನ್ಸ್ ಜಿಯೋ ಟಕ್ಕರ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ಜಿಯೋ ಡಾಟಾ 10 ಜಿಬಿಗೆ ಕೇವಲ 50 ರೂಪಾಯಿ, 20 ಜಿಬಿಗೆ 100 ರೂಪಾಯಿ, 40 ಜಿಬಿಗೆ 200 ಮತ್ತು 80 ಜಿಬಿಗೆ 400 ರೂಪಾಯಿದೆ. ಉಚಿತ ಎಸ್ ಎಂ ಎಸ್ ಸೌಲಭ್ಯವಿದೆ. ಹಾಗಾಗಿ ಗ್ರಾಹಕರು ಜಿಯೋ ಬೆಸ್ಟ್ ಅಂದುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...