alex Certify
ಕನ್ನಡ ದುನಿಯಾ       Mobile App
       

Kannada Duniya

ಓಲಾದಲ್ಲಿ ಬಾಡಿಗೆಗೆ ಸಿಗ್ತಿದೆ ಸೈಕಲ್

ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಉಬರ್ ಪ್ರಯಾಣಿಕರ ಸಮಸ್ಯೆಯನ್ನು ಅರ್ಥ ಮಾಡಿಕೊಂಡಿದೆ. ಪ್ರತಿಯೊಂದು ವರ್ಗಕ್ಕೂ ಹತ್ತಿರವಾಗಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ತನ್ನ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಪಡಿಸಿಕೊಳ್ತಿದೆ.

ಇತ್ತೀಚಿಗೆ ಹೊಸ ಸೇವೆಯನ್ನು ಓಲಾ ಶುರುಮಾಡಿದೆ. ಕ್ಯಾಬ್, ಆಟೋ, ಬೈಕ್ ನಂತ್ರ ಈಗ ಸೈಕಲನ್ನು ಬಾಡಿಗೆಗೆ ನೀಡ್ತಿದೆ. ಕಡಿಮೆ ದೂರ ತಲುಪಲು ಸೈಕಲ್ ಬೆಸ್ಟ್. ಪರಿಸರ ರಕ್ಷಣೆ ಜೊತೆಗೆ ಆರೋಗ್ಯ ವೃದ್ಧಿಗೂ ಇದು ಸಹಕಾರಿ. ಪ್ರಾಯೋಗಿಕ ಯೋಜನೆಯಾಗಿ `ಓಲಾ ಪೆಡಲ್’ ಹೆಸರಿನ ಹೊಸ ಸೇವೆ ಶುರುಮಾಡಿದೆ.

ಕಾನ್ಪುರದ ಐಐಟಿ ಕ್ಯಾಂಪಸ್ ನಲ್ಲಿ ಈ ಸೇವೆ ಶುರುವಾಗಿದೆ. ಕ್ಯಾಂಪಸ್ ಒಳಗೆ ಬರಲು ಹಾಗೂ ಹೊರಗೆ ಹೋಗಲು ವಿದ್ಯಾರ್ಥಿಗಳಿಗೆ ಸೈಕಲ್ ಸೇವೆ ನೀಡ್ತಾಯಿದೆ ಓಲಾ. ಈ ಯೋಜನೆಯಡಿ 600 ಸೈಕಲ್ ಕ್ಯಾಂಪಸ್ ನಲ್ಲಿ ಲಭ್ಯವಿದೆ. ಆ್ಯಪ್ ಮೂಲಕ ಸೈಕಲ್ ಬುಕ್ ಮಾಡಬೇಕಾಗುತ್ತದೆ. ಇದಕ್ಕೆ ಒಂದು ಕೋಡ್ ನೀಡಲಾಗುತ್ತದೆ. ಆ ಕೋಡ್ ಸಹಾಯದಿಂದ ಸೈಕಲ್ ಲಾಕ್ ತೆಗೆಯಬಹುದು. ಕೆಲಸ ಮುಗಿದ ತಕ್ಷಣ ಸ್ಥಳೀಯ ಓಲಾ ಪಾರ್ಕಿಂಗ್ ಪ್ಲೇಸ್ ಗೆ ಇದನ್ನು ತಲುಪಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...