alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಮಾಲೀಕರನ್ನು ಮತ್ತಷ್ಟು ಕಂಗೆಡಿಸುತ್ತೆ ಪೆಟ್ರೋಲ್-ಡೀಸೆಲ್ ಕುರಿತ ಈ ಸುದ್ದಿ

ಕಳೆದ ಒಂದು ತಿಂಗಳಿಂದೀಚೆಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೇ ವೇಳೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.

ಇಂಧನ ಬೆಲೆ ನಿಯಂತ್ರಣಕ್ಕೆ ಬರಬಹುದೆಂಬುದು ಕೇಂದ್ರ ಸರ್ಕಾರದ ಆಶಾಭಾವನೆ. ಆದರೆ 2019 ರಲ್ಲಿ ಇಂಧನ ಬೆಲೆ ಇನ್ನಷ್ಟು ಗಗನಮುಖಿಯಾಗಲಿದೆ ಎನ್ನಲಾಗುತ್ತಿದೆ.

ಇರಾನ್ ವಿರುದ್ಧ ಅಮೆರಿಕ ನಿರ್ಬಂಧಗಳು ಹೆಚ್ಚುತ್ತಿರುವುದರ ಪರಿಣಾಮ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿದೆ. ಕಚ್ಛಾ ತೈಲ ಬೆಲೆ 2019 ರ ಹೊತ್ತಿಗೆ ಪ್ರತಿ ಬ್ಯಾರೆಲ್ ಗೆ 100 ಡಾಲರ್‌ಗೆ ಏರಿಕೆಯಾಗಲಿದೆ ಎಂದು ಸರಕು ಸಾಗಣೆ ವ್ಯಾಪಾರಿಗಳಾದ ಟ್ರಾಫಿಗುರಾ ಮತ್ತು ಮರ್ಕ್ಯುರಿಯಾ ಅಭಿಪ್ರಾಯಪಟ್ಟಿವೆ. ಸಿಂಗಾಪುರದ ವಾರ್ಷಿಕ ಏಷ್ಯಾ ಪೆಸಿಫಿಕ್ ಪೆಟ್ರೋಲಿಯಂ ಕಾನ್ಫರೆನ್ಸ್ ನಲ್ಲಿ ಈ ಸಂಗತಿ ಬಹಿರಂಗಪಡಿಸಿವೆ.

ಇರಾನ್ ವಿರುದ್ಧ ಅಮೆರಿಕಾ ನಿರ್ಬಂಧಗಳ ಪರಿಣಾಮ ಈ ವರ್ಷದ ಕೊನೆ ತ್ರೈಮಾಸಿಕದಲ್ಲಿ ಇನ್ನಷ್ಟು ಗಂಭೀರವಾಗಲಿದೆ. ಪ್ರತಿ ಬ್ಯಾರಲ್ ಕಚ್ಛಾ ತೈಲ ಬೆಲೆ ನೂರು ಡಾಲರ್ ಮುಟ್ಟಬಹುದು ಎಂದು ಮರ್ಕ್ಯುರಿಯಾ ಎನರ್ಜಿ ಟ್ರೇಡಿಂಗ್ ಅಧ್ಯಕ್ಷ ಡೇನಿಯಲ್ ಜೈಗಿ ಹೇಳಿದ್ದಾರೆ.

ಟ್ರಾಫಿಗುರಾ ತೈಲ ವ್ಯಾಪಾರದ ಸಹ-ಮುಖ್ಯಸ್ಥ ಬೆಲ್ ಲಕ್ಯಾಕ್, ಕಚ್ಚಾ ತೈಲ ಬೆಲೆಗಳು ಕ್ರಿಸ್ಮಸ್ ನಿಂದ ಪ್ರತಿ ಬ್ಯಾರೆಲ್ ಗೆ 90 ಡಾಲರ್‌ಗೆ ಏರಿಕೆಯಾಗಬಹುದು ಮತ್ತು ಹೊಸ ವರ್ಷದ ವೇಳೆಗೆ 100 ಡಾಲರ್ ಗೆ ಏರಿಕೆಯಾಗಬಹುದು ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...