alex Certify
ಕನ್ನಡ ದುನಿಯಾ       Mobile App
       

Kannada Duniya

ತೈಲ ದರ ಪರಿಷ್ಕರಣೆ ಕುರಿತು ಪೆಟ್ರೋಲಿಯಂ ಸಚಿವರು ನೀಡಿದ್ರು ಈ ಹೇಳಿಕೆ

ಏರಿಕೆ ಹಾದಿ ಹಿಡಿದಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕಳೆದ ಆರು ದಿನಗಳಿಂದ ಅಲ್ಪ ಪ್ರಮಾಣದ ಇಳಿಕೆ ಕಾಣುವ ಮೂಲಕ ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಗಳಿಗನುಗುಣವಾಗಿ ಭಾರತದಲ್ಲೂ ತೈಲ ಬೆಲೆ ಏರಿಳಿತ ಕಾಣುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪ್ರತಿದಿನ ತೈಲ ದರ ಪರಿಷ್ಕರಣೆಯ ಪದ್ಧತಿಯನ್ನು ಮರುಪರಿಶೀಲಿಸುವ ಸಾಧ್ಯತೆ ಇಲ್ಲವೆಂದಿದ್ದಾರೆ.

ತೈಲ ದರ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ಬಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ತೈಲ ಆರ್ಥಿಕತೆ ಹದಗೆಟ್ಟಿದ್ದು, ತೈಲ ಕಂಪನಿಗಳಿಗೆ ಸಬ್ಸಿಡಿ ನೀಡುವ ಸಲುವಾಗಿ ತೈಲ ಬಾಂಡ್ ಗಳ ಮೂಲಕ ನಿಧಿ ಸಂಗ್ರಹಿಸಲಾಗಿತ್ತು. ಅದರ ಮರುಪಾವತಿಯನ್ನು ಈಗಿನ ಸರ್ಕಾರ ಮಾಡುತ್ತಿದೆ ಎಂದು ನಿತ್ಯ ದರ ಪರಿಷ್ಕರಣೆ ಪದ್ಧತಿಯನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...