alex Certify
ಕನ್ನಡ ದುನಿಯಾ       Mobile App
       

Kannada Duniya

ಆಫೀಸ್ ಬಾಯ್ ಗೆ ಸಿಗಲಿದೆ 50 ಲಕ್ಷ ರೂ…!

company-final

ಮಲ್ಟಿನ್ಯಾಷನಲ್ ಕಂಪನಿಗಳು ಯುವಜನತೆಯನ್ನು ಆಕರ್ಷಿಸ್ತಾ ಇವೆ. ಅಲ್ಲಿ ಸಿಗುವ ಪ್ಯಾಕೇಜ್ ಹಾಗೂ ಇತರೇ ಸೌಲಭ್ಯಗಳಿಂದಾಗಿ ಯುವಜನತೆ ಅಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ. ಅಂತಹದ್ದೇ ಒಂದು ಕಂಪನಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಆಫೀಸ್ ಬಾಯ್ ಗೆ 50 ಲಕ್ಷ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಿದೆ.

ಯಸ್, ನಂಬಲು ಸಾಧ್ಯವಾಗದೆ ಹೋದ್ರೂ ಇದು ಸತ್ಯ. ಅತಿ ದೊಡ್ಡ ಆನ್ಲೈನ್ ಪೇಮೆಂಟ್ ಕಂಪನಿ ಪೇಯು ಮುಂಬೈ ಮೂಲದ ಸಿಟ್ರಸ್ ಪೇ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಪೇಯು ಕಂಪನಿ 860 ಕೋಟಿ ರೂಪಾಯಿಗೆ ಸಿಟ್ರಸ್ ಪೇ ಕಂಪನಿಯನ್ನು ಖರೀದಿ ಮಾಡುವ ಮೂಲಕ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಡೀಲ್ ಎನ್ನಿಸಿಕೊಂಡಿದೆ. ಸಿಟ್ರಸ್ ಪೇ ಕಂಪನಿ 2011ರಲ್ಲಿ ಶುರುವಾಗಿತ್ತು. ಆಗ 10,000 ವ್ಯಾಪಾರಿಗಳು ಕೈಜೋಡಿಸಿದ್ದರು.

ಪೇಯು ಕಂಪನಿ ಸಿಟ್ರಸ್ ಪೇ ಕಂಪನಿಯನ್ನು ಖರೀದಿ ಮಾಡಿದ ನಂತ್ರ ಬರುವ ಲಾಭಾಂಶ 43 ಕೋಟಿಯನ್ನುಉದ್ಯೋಗಿಗಳು ಹಂಚಿಕೊಳ್ಳಲಿದ್ದಾರೆ. ಅದ್ರಲ್ಲಿ ಉದ್ಯೋಗಿಗಳಿಗೆ 1 ಕೋಟಿ ಹಾಗೂ ಆಫೀಸ್ ಬಾಯ್ ಗೆ 50 ಲಕ್ಷ ನೀಡಲು ಸಿಟ್ರಸ್ ಕಂಪನಿ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...