alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಕುಳಿತು ಆಧಾರ್ ಜೊತೆ ಲಿಂಕ್ ಮಾಡಿ ಪಿಎಫ್ ಅಕೌಂಟ್

ಕೇಂದ್ರ ಸರ್ಕಾರ ನೌಕರರ ಕೆಲಸವನ್ನು ಸುಲಭ ಮಾಡಿದೆ. ನೌಕರರ ಪ್ರಾವಿಡೆಂಟ್ ಫಂಡ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಲು ಉಮಂಗ್ ಆ್ಯಪ್ ನಲ್ಲಿ ಅವಕಾಶ ನೀಡಿದೆ. ಉಮಂಗ್ ಆ್ಯಪ್ ಮೂಲಕ ನೀವು ಪಿಎಫ್ ಖಾತೆಯನ್ನು ಆಧಾರ್ ಜೊತೆ ಸುಲಭವಾಗಿ ಲಿಂಕ್ ಮಾಡಬಹುದಾಗಿದೆ.

ಇದು ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್ಒ) ವೆಬ್ಸೈಟ್ ನ ಹೊಸ ಸೌಲಭ್ಯವಾಗಿದೆ. ಕಾರ್ಮಿಕ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಡಿಜಿಟಲ್ ಇಂಡಿಯಾದ ಇನ್ನೊಂದು ಹೆಜ್ಜೆಯಿದು ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಸೌಲಭ್ಯ ಇಪಿಎಫ್ಒ ಪೋರ್ಟಲ್ ನಲ್ಲಿ ನೋಂದಾಯಿಸಿದ ನೌಕರರಿಗೆ ಸಿಗಲಿದೆ.

ಎಲ್ಲಾ ಸರ್ಕಾರಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ನೀಡುವ ಉದ್ದೇಶದಿಂದ ಸರ್ಕಾರ ಉಮಂಗ್ ಮೊಬೈಲ್ ಅಪ್ಲಿಕೇಷನ್ ಶುರು ಮಾಡಿದೆ. ಜಾಗತಿಕ ಸೈಬರ್ ಬಾಹ್ಯಾಕಾಶ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಆ್ಯಪ್ ಬಿಡುಗಡೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...