alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಜಾರ್’ ನಲ್ಲೂ ಸಿಗುತ್ತೇ ಕ್ಯಾಶ್

bigbazaarನವೆಂಬರ್ 8 ರಿಂದ 500 ಹಾಗೂ 1000 ರೂ. ನೋಟುಗಳು ನಿಷೇಧಗೊಂಡ ಬಳಿಕ ನೋಟು ಬದಲಾವಣೆಗಾಗಿ ಹಾಗೂ ಅಗತ್ಯಕ್ಕೆ ಹಣ ಪಡೆಯಲು ಸಾರ್ವಜನಿಕರು ಬ್ಯಾಂಕ್ ಹಾಗೂ ಎಟಿಎಂ ಗಳ ಮುಂದೆ ಕ್ಯೂ ಹಚ್ಚಿದ್ದಾರೆ.

ಎಟಿಎಂಗಳಲ್ಲಿ ಕೇವಲ 2000 ರೂ. ಹೊಸ ನೋಟು ಬರುತ್ತಿದ್ದ ಕಾರಣ ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದವರಿಗೆ ಬಿಗ್ ರಿಲೀಫ್ ಎಂಬಂತೆ ಇದೀಗ 500 ರೂ. ಮುಖ ಬೆಲೆಯ ಹೊಸ ನೋಟುಗಳೂ ಎಟಿಎಂಗಳಲ್ಲಿ ಲಭ್ಯವಾಗುತ್ತಿದೆ.

ಈ ಮಧ್ಯೆ ಪೆಟ್ರೋಲ್ ಸ್ಟೇಷನ್ ಗಳಲ್ಲೂ 2,000 ರೂ. ವರೆಗೆ ಹಣ ಡ್ರಾ ಮಾಡುವ ಸೌಲಭ್ಯ ಕಲ್ಪಿಸಿದ್ದರ ನಡುವೆ ಇದೀಗ ‘ಬಿಗ್ ಬಜಾರ್’ ಸ್ಟೋರ್ ಗಳಲ್ಲೂ ಸಾರ್ವಜನಿಕರು ತಮ್ಮ ಡೆಬಿಟ್ ಕಾರ್ಡ್ ಬಳಸಿ 2,000 ರೂ. ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು, ದೇಶಾದ್ಯಂತ ಇರುವ ‘ಬಿಗ್ ಬಜಾರ್’ ನ 260 ಮಳಿಗೆಗಳಲ್ಲಿ ತಮ್ಮ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡಬಹುದಾಗಿದೆ. ನವೆಂಬರ್ 24 ರ ಗುರುವಾರದಿಂದ ಈ ಸೌಲಭ್ಯ ಜಾರಿಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...