alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರಿಗೆ ಶಾಕ್: ಹೆಚ್ಚಿನ ಲಗೇಜಿಗೆ ಬೀಳುತ್ತೆ ಭಾರಿ ದಂಡ

ರೈಲಿನಲ್ಲಿ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ವಿಮಾನ ಪ್ರಯಾಣ ದಂತೆಯೇ ಇನ್ನು ಮೇಲೆ ರೈಲಿನಲ್ಲಿ ಪ್ರಯಾಣಿಸುವವರು ನಿಗದಿಪಡಿಸಿದ ತೂಕದಷ್ಟು ಮಾತ್ರ ಲಗೇಜನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಇದು ಮೀರಿದರೆ ಆರು ಪಟ್ಟು ದಂಡ ತೆರಬೇಕಾಗುತ್ತದೆ.

ರೈಲಿನಲ್ಲಿ ಪ್ರಯಾಣಿಸುವವರ ಲಗೇಜ್ ಕುರಿತು ಈಗಾಗಲೇ ಇರುವ ನಿಯಮವನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ಪಾಲಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಪ್ರಸ್ತುತ ಇರುವ ನಿಯಮದಂತೆ ಸ್ಲೀಪರ್ ಮತ್ತು ಸೆಕೆಂಡ್ ಕ್ಲಾಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕ್ರಮವಾಗಿ 40 ಹಾಗೂ 35 ಕೆಜಿ ತೂಕದ ಲಗೇಜನ್ನು ಉಚಿತವಾಗಿ ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದಾಗಿದೆ. ಲಗೇಜಿನ ತೂಕ ಇದನ್ನು ಮೀರಿದರೆ ಪಾರ್ಸೆಲ್ ಕಚೇರಿಯಲ್ಲಿ ಪ್ರತ್ಯೇಕ ಶುಲ್ಕ ಪಾವತಿಸಿ ಹೆಚ್ಚುವರಿ ಲಗೇಜನ್ನು ಲಗೇಜ್ ವ್ಯಾನ್ ಗೆ ಹಾಕಬೇಕಾಗುತ್ತದೆ.

ಎ ಸಿ ಫಸ್ಟ್ ಕ್ಲಾಸ್ ನಲ್ಲಿ ಪ್ರಯಾಣಿಸುವವರು 70 ಕೆಜಿ ತೂಕದ ಲಗೇಜನ್ನು ತಮ್ಮೊಂದಿಗೆ ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಎಸಿ 2 ಟೈಯರ್ ಪ್ರಯಾಣಿಕರು 50 ಕೆಜಿ ತೂಕದ ಲಗೇಜನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ.

ಕೆಲವು ಪ್ರಯಾಣಿಕರು ಮಿತಿಮೀರಿದ ಲಗೇಜನ್ನು ತೆಗೆದುಕೊಂಡು ಬಂದು ಬೋಗಿಯಲ್ಲಿ ಹಾಕುತ್ತಿದ್ದ ಕಾರಣ ಇತರೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಹಳಷ್ಟು ದೂರುಗಳು ರೈಲ್ವೆ ಇಲಾಖೆಗೆ ಬಂದಿದ್ದು, ಲಗೇಜಿನ ಕುರಿತು ಈಗಾಗಲೇ ಇರುವ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...