alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಳಾಗಿರೋ ‘ಮೊಬೈಲ್’ ಯಂತ್ರಕ್ಕೆ ಹಾಕಿ ಹಣಗಳಿಸಿ..!

2017_4image_15_01_384616612machine-ll

ಮೊಬೈಲ್ ಹಾಳಾಗಿದೆ, ಕೀ ಬೋರ್ಡ್ ಕೆಲಸ ಮಾಡ್ತಿಲ್ಲ. ಹಾಳಾಗಿರೋ ಮೌಸ್, ಹೆಡ್ಫೋನ್ ತೆಗೆದು ಕಸಕ್ಕೆ ಎಸೆಯೋ ಯೋಚನೆಯಲ್ಲಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಏನಕ್ಕೂ ಪ್ರಯೋಜನವಿಲ್ಲ ಎನ್ನುವ ವಸ್ತುಗಳಿಂದ ಹಣ ಗಳಿಸಬಹುದು. ಕನ್ನಾಟ್ ಪ್ಲೇಸ್ ಮತ್ತು ಇಂಡಿಯಾ ಗೇಟ್ ಬಳಿ ನಿಮಗೆ ಈ ವಸ್ತುಗಳಿಗೆ ತಕ್ಕ ಬೆಲೆ ಸಿಗಲಿದೆ.

ದೇಶದ ಮೊದಲ ಇ-ತ್ಯಾಜ್ಯ ಮಾರಾಟ ಯಂತ್ರವನ್ನು ಇಲ್ಲಿ ಅಳವಡಿಸಲಾಗ್ತಾ ಇದೆ. ಭಾರತ ಸರ್ಕಾರ ಮತ್ತು ದೆಹಲಿ ಮುನ್ಸಿಪಲ್ ಕೌನ್ಸಿಲ್ ಸಹಯೋಗದೊಂದಿಗೆ ಸ್ಟಾರ್ಟ್ ಅಪ್ ಕಂಪನಿಯೊಂದು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಇ-ತ್ಯಾಜ್ಯ ಮಾರಾಟ ಯಂತ್ರದಲ್ಲಿ ಪ್ಲಾಸ್ಟಿಕ್ ಬಾಟಲಿ ಅಥವಾ ಬಿಯರ್ ಬಾಟಲಿ ಹಾಕಿದ್ರೆ ಪ್ರತಿ ಬಾಟಲಿಗೆ 2 ರೂಪಾಯಿ ಸಿಗಲಿದೆ.

ಯಾವ ವಸ್ತು ಹಾಕಿದ್ರೆ ಎಷ್ಟು ಹಣ ಸಿಗಲಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಂಪನಿ ಇನ್ನೂ ನೀಡಿಲ್ಲ. ಯಂತ್ರ ಅಳವಡಿಕೆ ನಂತ್ರ ದರ ನಿಗದಿ ಮಾಡಲಿದೆ. ಯಂತ್ರದಲ್ಲಿ ನಿಮ್ಮದೊಂದು ಖಾತೆ ತೆರೆಯಬೇಕಾಗುತ್ತದೆ. ಜೊತೆಗೆ ಕಂಪನಿಗೆ ಸಂಬಂಧಿಸಿದ ಅಪ್ಲಿಕೇಷನ್ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಬೇಕು. ನಂತ್ರ ಕಂಪನಿ ಹೇಳಿದ ನಿಯಮಗಳನ್ನು ಪಾಲಿಸಿದ್ರೆ ಇ ವಾಲೆಟ್ ಗೆ ಹಣ ರವಾನೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...