alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಆನ್ಲೈನ್ ನಲ್ಲಿ ಸಿಗಲಿದೆ ಅಂಚೆ ಕಚೇರಿಯ ಈ ಎಲ್ಲ ಸೇವೆ

ಅಂಚೆ ಕಚೇರಿ ಶೀಘ್ರವೇ ಡಿಜಿಟಲ್ ಬ್ಯಾಂಕಿಂಗ್ ಸೇವೆ ಶುರು ಮಾಡಲಿದೆ. ಇದ್ರ ಪ್ರಕಾರ ಅಂಚೆ ಕಚೇರಿಯ 34 ಕೋಟಿ ಉಳಿತಾಯ ಖಾತೆದಾರರಿಗೆ ಲಾಭವಾಗಲಿದೆ. ಸರ್ಕಾರ ಐಪಿಪಿಬಿ ಜೊತೆ ಖಾತೆ ಸಂಪರ್ಕಿಸಲು ಒಪ್ಪಿಗೆ ನೀಡಿದೆ. ಹಾಗಾಗಿ ಖಾತೆದಾರರಿಗೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಸಿಗೋದು ಖಚಿತವಾಗಿದೆ.

ಇದ್ರಿಂದ ಖಾತೆದಾರರಿಗೆ ಸಾಕಷ್ಟು ಲಾಭವಿದೆ. ಅಂಚೆ ಕಚೇರಿ ಖಾತೆಯಿಂದ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. 17 ಕೋಟಿ ಅಂಚೆ ಕಚೇರಿಯಲ್ಲಿ ಸೇವಿಂಗ್ ಬ್ಯಾಂಕ್ ಅಕೌಂಟ್ ಇದೆ. ಉಳಿದ ಕಚೇರಿಗಳಲ್ಲಿ ತಿಂಗಳ ಸ್ಕೀಂ ಸೇರಿದಂತೆ ಕೆಲ ಸೌಲಭ್ಯಗಳಿವೆ. ಹಣ ವರ್ಗಾವಣೆ ಮಾಡಲು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಆನ್ಲೈನ್ ಮೂಲಕವೇ ಗ್ರಾಹಕರು ಕೆಲಸ ಮುಗಿಸಬಹುದು.

ಸರ್ಕಾರದ ಮಹತ್ವದ ನಿರ್ಧಾರದ ಬಳಿಕ ಅಂಚೆ ಕಚೇರಿಯ 1.55 ಲಕ್ಷ ಅಂಚೆ ಕಚೇರಿ ಶಾಖೆಗಳು ಐಪಿಪಿಬಿ ಜೊತೆ ಸಂಪರ್ಕಕ್ಕೆ ಬರಲಿವೆ. ಗ್ರಾಹಕರು ಬಯಸಿದ್ರೆ ಮಾತ್ರ ಈ ಸೇವೆಯನ್ನು ಅಂಚೆ ಕಚೇರಿ ನೀಡಲಿದೆ. ಇಲ್ಲವಾದಲ್ಲಿ ಖಾತೆದಾರರ ಖಾತೆ ಸಂಖ್ಯೆಯನ್ನು ಐಪಿಪಿಬಿ ಜೊತೆ ಲಿಂಕ್ ಮಾಡಲಾಗುವುದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...