alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಫಾಸ್ಟ್ ಆದ್ವು ರೈಲು : ಏರಿತು ಪ್ರಯಾಣ ದರ

ನವದೆಹಲಿ: ಭಾರತೀಯ ರೈಲ್ವೇ 48 ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ಆಗಿ ಮಾರ್ಪಡಿಸಿದೆ. ಇದರೊಂದಿಗೆ ಪ್ರಯಾಣ ದರವನ್ನು ಕೂಡ ಏರಿಕೆ ಮಾಡಲಾಗಿದೆ.

ಟಿಕೆಟ್ ಬೆಲೆಗಳು 70 ರೂ. ವರೆಗೆ ಏರಿಕೆಯಾಗಿವೆ. ನವೆಂಬರ್ 1 ರಿಂದ ರೈಲುಗಳ ವೇಗವನ್ನು ಹೆಚ್ಚಿಸಿ ಸೂಪರ್ ಫಾಸ್ಟ್ ರೈಲುಗಳಾಗಿ ಪರಿವರ್ತಿಸಲಾಗಿದೆ. ಪ್ರಯಾಣಿಕರಿಗೆ ಯಾವುದೇ ಸೌಲಭ್ಯ ಒದಗಿಸದಿದ್ದರೂ, ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ.

ಪ್ರಯಾಣಿಕರು ಸ್ಲೀಪರ್ ಗೆ 30 ರೂ., ಸೆಕೆಂಡ್ ಮತ್ತು ಥರ್ಡ್ ಎ.ಸಿ.ಗೆ 45 ರೂ., ಫಸ್ಟ್ ಎ.ಸಿ. ಕ್ಲಾಸ್ ಗೆ 75 ರೂ. ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಿದೆ.

ಹೀಗಿದ್ದರೂ ರೈಲುಗಳು ನಿಗದಿತ ವೇಳೆಗೆ ಚಲಿಸುತ್ತವೆ ಎಂಬ ಯಾವುದೇ ಭರವಸೆ ಉಳಿದಿಲ್ಲ. ಉತ್ತರ ಭಾರತದ ಬಹುತೇಕ ರೈಲುಗಳು ಮಂಜಿನ ವಾತಾವರಣದಿಂದ ಹಲವು ಗಂಟೆಗಳು ವಿಳಂಬವಾಗಿ ಸಂಚರಿಸುತ್ತವೆ. ರಾಜಧಾನಿ, ಶತಾಬ್ಧಿ, ಡುರಂಟೋ ರೈಲುಗಳು ತಡವಾಗಿಯೇ ತಲುಪುತ್ತಿವೆ. ಒಟ್ಟು 1072 ರೈಲುಗಳನ್ನು ಸೂಪರ್ ಫಾಸ್ಟ್ ಆಗಿ ಮಾರ್ಪಡಿಸಿದ್ದು, ಸೂಪರ್ ಫಾಸ್ಟ್ ಲೆವಿಯನ್ನು ಸಂಗ್ರಹಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...